ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಪಂಜಾಬ್‌ ವಿರುದ್ಧ ಲಖನೌಗೆ 21 ರನ್ ಜಯ 

Published 30 ಮಾರ್ಚ್ 2024, 13:32 IST
Last Updated 30 ಮಾರ್ಚ್ 2024, 18:24 IST
ಅಕ್ಷರ ಗಾತ್ರ

ಲಖನೌ: ಇಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 21 ರನ್‌ಗಳ ಗೆಲುವು ದಾಖಲಿಸಿದೆ. ಪ್ರಸ್ತುತ ಪಂದ್ಯಾವಳಿಯಲ್ಲಿ ಇದು ಲಖನೌ ತಂಡದ ಮೊದಲ ಗೆಲುವಾಗಿದೆ.

ಲಖನೌ ನೀಡಿದ್ದ 200 ರನ್ ಗುರಿ ಬೆನ್ನತ್ತಿದ್ದ ಪಂಜಾಬ್ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 178 ರನ್ ಗಳಿಸಲಷ್ಟೇ ಶಕ್ತವಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲಖನೌ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರ 54, ನಿಕೊಲಸ್ ಪೂರನ್ ಗಳಿಸಿದ 42 ಮತ್ತು ಆಯುಶ್ ಬದೋನಿ ಸಿಡಿಸಿದ ಅಜೇಯ 43 ರನ್ ನೆರವಿನಿಂದ 199 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು. ಪಂಜಾಬ್‌ ಪರ ಸ್ಯಾಮ್‌ ಕರನ್‌ 3 ವಿಕೆಟ್‌ ಪಡೆದರು. 

ಸವಾಲಿನ ಮೊತ್ತ ಬೆನ್ನತ್ತಿದ ಪಂಜಾಬ್‌ಗೆ ನಾಯಕ ಶಿಖರ್ ಧವನ್ 72 ಮತ್ತು ಜಾನಿ ಬೆಸ್ಟೋ 42 ರನ್ ಸಿಡಿಸಿ ಉತ್ತಮ ಆರಂಭ ನೀಡಿದರಾದರೂ ನಂತರ ಬಂದ ಬ್ಯಾಟರ್ ಅದನ್ನು ಮುಂದುವರಿಸಲು ವಿಫಲವಾಗಿದ್ದರಿಂದ ತಂಡಕ್ಕೆ ಸೋಲಾಯಿತು.

ಸಂಕ್ಷಿಪ್ತ ಸ್ಕೋರ್

ಲಖನೌ ಸೂಪರ್‌ ಜೈಂಟ್ಸ್

8ಕ್ಕೆ199 (20 ಓವರ್‌ಗಳಲ್ಲಿ) 

ಕ್ವಿಂಟನ್ ಸಿ ಜಿತೇಶ್ ಬಿ ಅರ್ಷದೀಪ್ 54 (38ಎ, 4X5, 6X2) 

ರಾಹುಲ್ ಸಿ ಜಾನಿ ಬಿ ಅರ್ಷದೀಪ್ 15 (9ಎ, 4X1, 6X1)

ದೇವದತ್ತ ಸಿ ಧವನ್ ಬಿ ಸ್ಯಾಮ್ 9 (6ಎ, 4X2)

ಮಾರ್ಕಸ್ ಬಿ ಚಾಹರ್ 19 (12ಎ, 6X2)

ಪೂರನ್ ಬಿ ರಬಾಡ 42 (21ಎ, 4X3, 6X3)

ಆಯುಷ್ ಸಿ ಜಾನಿ ಬಿ ಸ್ಯಾಮ್ 8 (10ಎ)

ಕೃಣಾಲ್  ಔಟಾಗದೆ 43 (22ಎ, 4X4, 6X2)

ರವಿ ಸಿ (ಬದಲಿ ಫೀಲ್ಡರ್/ನಟರಾಜನ್) ಬಿ ಸ್ಯಾಮ್ 0 (1ಎ)

ಮೊಹಸಿನ್ ರನ್‌ಔಟ್ (ಹರ್ಷಲ್ ಪಟೇಲ್) 2 (1ಎ)

ನವೀನ್ ಉಲ್ ಹಕ್ ಔಟಾಗದೆ 0

ಇತರೆ: 7 (ಬೈ 1, ಲೆಗ್‌ಬೈ 1, ವೈಡ್ 5)

ವಿಕೆಟ್ ಪತನ: 1–35 (ಕೆ.ಎಲ್. ರಾಹುಲ್; 3.5), 2–45 (ದೇವದತ್ತ ಪಡಿಕ್ಕಲ್; 5.1), 3–78 (ಮಾರ್ಕಸ್ ಸ್ಟೊಯಿನಿಸ್; 8.4), 4–125 (ಕ್ವಿಂಟನ್ ಡಿ ಕಾಕ್; 13.1), 5–146 (ನಿಕೊಲಸ್ ಪೂರನ್; 15.1), 6–189 (ಆಯುಷ್ ಬದೋನಿ; 18.4), 7–189 (ರವಿ ಬಿಷ್ಣೋಯಿ; 18.5), 8–197 (ಮೊಹಸಿನ್ ಖಾನ್; 19.4)

ಬೌಲಿಂಗ್‌: ಸ್ಯಾಮ್ ಕರನ್ 4–0–28–3, ಅರ್ಷದೀಪ್ ಸಿಂಗ್ 3–0–30–2, ಕಗಿಸೊ ರಬಾಡ 4–0–38–1, ರಾಹುಲ್ ಚಾಹರ್ 3–0–42–1, ಹರಪ್ರೀತ್ ಬ್ರಾರ್ 2–0–14–0, ಹರ್ಷಲ್ ಪಟೇಲ್ 4–0–45–0

ಪಂಜಾಬ್ ಕಿಂಗ್ಸ್: 5ಕ್ಕೆ 178 (20 ಓವರುಗಳಲ್ಲಿ)

ಧವನ್ ಸಿ ಡಿ ಕಾಕ್ ಬಿ ಮೊಹ್ಸಿನ್ 70 (50ಎ, 4x7, 6x3)

ಬೇಸ್ಟೊ ಸಿ ಸ್ಟೊಯಿನಿಸ್ ಬಿ ಮಯಂಕ್ 42 (29ಎ, 4x3, 6x3)

ಪ್ರಭಸಿಮ್ರನ್ ಸಿ ನವೀನ್ ಬಿ ಮಯಂಕ್ 19 (7ಎ, 4x1, 6x2)

‌ಜಿತೇಶ್ ಸಿ ನವೀಣ್ ಬಿ ಮಯಂಕ್ 6 (9ಎ, 4x1)

ಲಿವಿಂಗ್‌ಸ್ಟೋನ್ ಔಟಾಗದೇ 28 (17ಎ, 4x2, 6x2)

ಕರನ್ ಸಿ ಪೂರನ್ ಬಿ ಮೊಹ್ಸಿನ್ 0 (1ಎ)

ಶಶಾಂಕ್ ಔಟಾಗದೇ 9 (7ಎ, 4x1)

ಇತರೆ: 4 (ಲೆಗ್‌ಬೈ 2, ವೈಡ್‌ 2)

ವಿಕೆಟ್ ಪತನ: 1–102 (ಜಾನಿ ಬೇಸ್ಟೊ, 11.4), 2–128 (ಪ್ರಭಸಿಮ್ರನ್ ಸಿಂಗ್‌, 13.3), 3–139 (ಜಿತೇಶ್ ಶರ್ಮಾ, 15.4), 4–141 (ಶಿಖರ್ ಧವನ್, 16.2), 5–141 (ಸ್ಯಾಮ್ ಕರನ್, 16.3).

ಬೌಲಿಂಗ್‌: ಮಣಿಮಾರನ್ ಸಿದ್ಧಾರ್ಥ್ 2–0–21–0, ನವೀನ್ ಉಲ್ ಹಕ್ 4–0–41–0; ಮೊಹಿಸಿನ್ ಖಾನ್ 4–0–34–2; ಕೃಣಾಲ್ ಪಾಂಡ್ಯ 3–0–26–0; ರವಿ ಬಿಷ್ಣೋಯಿ 3–0–25–0; ಮಯಂಕ್ ಯಾದವ್ 4–0–27–3.

ಪಂದ್ಯದ ಆಟಗಾರ: ಮಯಂಕ್ ಯಾದವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT