ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL Opening Ceremony: ಬೆಳಕಿನ ಚಿತ್ತಾರದ ನಡುವೆ ಅಕ್ಷಯ್, ಟೈಗರ್ ನೃತ್ಯದ ಝಲಕ್

Published 22 ಮಾರ್ಚ್ 2024, 14:05 IST
Last Updated 22 ಮಾರ್ಚ್ 2024, 14:05 IST
ಅಕ್ಷರ ಗಾತ್ರ

ಚೆನ್ನೈ: ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯ 17ನೇ ಆವೃತ್ತಿಯು ಇಂದಿನಿಂದ ಚೆನ್ನೈನಲ್ಲಿ ಆರಂಭವಾಗಿದೆ. ಪಿ. ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಟೂರ್ನಿಯು ಚಾಲನೆ ಪಡೆಯಿತು.

ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ, ಕಣ್ಣು ಕೋರೈಸುವ ಬೆಳಕಿನ ಚಿತ್ತಾರದ ನಡುವೆ, ಸಿನಿಮಾ ರಂಗದ ಪ್ರಮುಖ ತಾರೆಯರು ಹೆಜ್ಜೆ ಹಾಕಿದರು.

ಖ್ಯಾತ ನಟರಾದ ಅಕ್ಷಯ್‌ ಕುಮಾರ್, ಟೈಗರ್‌ ಶ್ರಾಫ್‌ ಅವರು ಒಟ್ಟಿಗೆ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

30 ನಿಮಿಷ ನಡೆದ ಉದ್ಘಾಟನಾ ಸಮಾರಂಭದಲ್ಲಿ ದಿಗ್ಗಜ ಸಂಗೀತಗಾರ ಎ.ಆರ್‌.ರೆಹಮಾನ್‌, ಗಾಯಕ ಸೋನು ನಿಗಮ್‌ ಅವರೂ ಪ್ರದರ್ಶನ ನೀಡಿದರು.

ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕಳೆದ ಬಾರಿಯ ಉದ್ಘಾಟನಾ ಸಮಾರಂಭದಲ್ಲಿ ನಟಿಯರಾದ ತಮ್ಮನ್ನಾ ಭಾಟಿಯಾ, ರಶ್ಮಿಕಾ ಮಂದಣ್ಣ, ಗಾಯಕ ಅರ್ಜಿತ್‌ ಸಿಂಗ್‌ ಪ್ರದರ್ಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT