ಅಹಮದಾಬಾದ್: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ಕಳೆದ 18 ವರ್ಷಗಳಿಂದ ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಆರ್ಸಿಬಿಯ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಮೂರು ಬಾರಿ ರನ್ನರ್-ಅಪ್ ಆಗಿದ್ದು, ನಾಲ್ಕನೇ ಸಲ ಗುರಿ ಮುಟ್ಟು ನಿರೀಕ್ಷೆಯಲ್ಲಿದ್ದಾರೆ.

ಈ ಫೈನಲ್ ಪಂದ್ಯಕ್ಕೆ ಆರ್ಸಿಬಿಯ ಇಬ್ಬರು ದಿಗ್ಗಜರು ಸಾಕ್ಷಿಯಾಗಲಿದ್ದಾರೆ. ಅವರೇ ವೆಸ್ಇಂಡೀಸ್ನ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್.

ವಿರಾಟ್ ಕೊಹ್ಲಿ ಮೂಲಕ ತಮಗೆ ಪೂರ್ಣಗೊಳಿಸಲು ಸಾಧ್ಯವಾಗದ ಕನಸನ್ನು ಗೇಲ್ ಹಾಗೂ ವಿಲಿಯರ್ಸ್ ನನಸಾಗಿಸುವ ಇರಾದೆಯಲ್ಲಿದ್ದಾರೆ.

2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಫೈನಲ್ ತಲುಪಿದಾಗ ಗೇಲ್ ಹಾಗೂ ಡಿವಿಲಿಯರ್ಸ್ ತಂಡದ ಸದಸ್ಯರಾಗಿದ್ದರು.

ಬಳಿಕ ಕ್ರಿಸ್ ಗೇಲ್ ಹಾಗೂ ಡಿವಿಲಿಯರ್ಸ್ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು 'ಆರ್ಸಿಬಿ ಹಾಲ್ ಆಫ್ ಫೇಮ್' ಗೌರವ ಸಲ್ಲಿಸಲಾಗಿತ್ತು.

ಇಂದಿನ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಅಥವಾ ಪಂಜಾಬ್ ಪೈಕಿ ಯಾವ ತಂಡ ಗೆದ್ದರೂ ನೂತನ ಇತಿಹಾಸ ಸೃಷ್ಟಿಯಾಗಲಿದೆ.
.IPL 2025 | ಫೈನಲ್ಗೂ ಮುನ್ನ ವಿರಾಟ್ಗೆ ವಿಶೇಷ ಸಂದೇಶ ರವಾನಿಸಿದ ವಿಲಿಯರ್ಸ್.IPL 2025 Final: 'ಈ ಸಲ ಕಪ್ ನಮ್ದೇ'; ಮೀಮ್ಸ್ ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.