ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಕ್ವಾಲಿಫೈಯರ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾರಣಕ್ಕಾಗಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ದಂಡ ವಿಧಿಸಲಾಗಿದೆ.

ಪಂಜಾಬ್ ಪಡೆ ಟೂರ್ನಿಯಲ್ಲಿ ಎರಡನೇ ಬಾರಿಗೆ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಅಯ್ಯರ್ ಅವರಿಗೆ ₹ 24 ಲಕ್ಷ ದಂಡ ವಿಧಿಸಲಾಗಿದೆ. ಮುಂಬೈ ಮೂರನೇ ಸಲ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪಾಂಡ್ಯ ಅವರಿಗೆ ₹ 30 ಲಕ್ಷ ದಂಡ ಹಾಕಲಾಗಿದೆ ಎಂದು ಐಪಿಎಲ್ ಹೇಳಿಕೆ ಬಿಡುಗಡೆ ಮಾಡಿದೆ.

ಶ್ರೇಯಸ್ ಬಳಗದ ಉಳಿದ ಆಟಗಾರರಿಗೆ ತಲಾ ₹ 6 ಲಕ್ಷ ಹಾಗೂ ಪಾಂಡ್ಯ ಪಡೆಯ ಪ್ರತಿ ಆಟಗಾರರಿಗೆ ತಲಾ ₹ 12 ಲಕ್ಷ ದಂಡ ಹಾಕಲಾಗಿದೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಮಣಿಸಿದ ಪಂಜಾಬ್, ಫೈನಲ್ಗೆ ಲಗ್ಗೆ ಇಟ್ಟಿದೆ. ನಾಳೆ (ಜೂನ್ 2) ಫೈನಲ್ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.
.IPL 2025 Qualifier 2 | ಮುಂಬೈಗೆ ನಿರಾಸೆ: ಫೈನಲ್ಗೆ ಲಗ್ಗೆಯಿಟ್ಟ ಶ್ರೇಯಸ್ ಪಡೆ.IPL 2025 | ಫೈನಲ್ಗೆ ಕಿಂಗ್ಸ್: ನಾಯಕನಾಗಿ ಅಯ್ಯರ್ ದಾಖಲೆ; ಇಲ್ಲಿದೆ ಹೈಲೈಟ್ಸ್.IPL 2025 | ಮತ್ತೆ ಮುಖಾಮುಖಿಯಾದ ಅಯ್ಯರ್–ರಜತ್: ಈ ಬಾರಿ ಗೆಲುವು ಯಾರಿಗೆ?.IPL 2025: 10 ಜಯ, 9 ಮಂದಿ ಪಂದ್ಯಶ್ರೇಷ್ಠ: ಮ್ಯಾಚ್ವಿನ್ನರ್ಗಳಿಂದ ಕೂಡಿದೆ RCB.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.