ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯು ರೋಚಕ ಹಂತವನ್ನು ತಲುಪಿದೆ. ಈಗಾಗಲೇ ಪ್ಲೇ-ಆಫ್ಗೆ ನಾಲ್ಕು ತಂಡಗಳು ಪ್ರವೇಶಿಸಿದರೂ ಅಗ್ರ ಎರಡು ಸ್ಥಾನಗಳು ಇನ್ನೂ ಖಚಿತವಾಗದೇ ಇರುವುದು ಟೂರ್ನಿಯ ರೋಚಕತೆಗೆ ಸಾಕ್ಷಿಯಾಗಿದೆ.

ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗೆ ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಿವೆ.

68ನೇ ಪಂದ್ಯದ ಅಂತ್ಯದ ವೇಳೆಗೆ (ಭಾನುವಾರ), ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ 18 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್, ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

ಈ ಪೈಕಿ ಪಂಜಾಬ್ ಹಾಗೂ ಆರ್ಸಿಬಿ ಸಮಾನ 17 ಅಂಕಗಳನ್ನು ಹಂಚಿಕೊಂಡರೂ ಉತ್ತಮ ರನ್ರೇಟ್ ಆಧಾರದಲ್ಲಿ ಪಂಜಾಬ್ (+0.327) ಎರಡನೇ ಸ್ಥಾನದಲ್ಲಿದೆ. ಆರ್ಸಿಬಿಯ ರನ್ರೇಟ್ +0.255 ಆಗಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿರುವ ಮುಂಬೈ 16 ಅಂಕಗಳನ್ನು ಹೊಂದಿದೆ.

ಗುಜರಾತ್ ತನ್ನೆಲ್ಲ 14 ಪಂದ್ಯಗಳನ್ನು ಪೂರ್ಣಗೊಳಿಸಿದೆ. ಆರ್ಸಿಬಿ, ಪಂಜಾಬ್ ಹಾಗೂ ಮುಂಬೈ ತಂಡಗಳಿಗೆ ತಲಾ ಒಂದು ಪಂದ್ಯ ಬಾಕಿ ಇದೆ. ಕೊನೆಯ ಪಂದ್ಯದಲ್ಲಿ ಆರ್ಸಿಬಿಯು ಲಖನೌ ಸೂಪರ್ ಕಿಂಗ್ಸ್ ವಿರುದ್ಧ ಮತ್ತು ಪಂಜಾಬ್ ತಂಡವು ಮುಂಬೈ ವಿರುದ್ಧ ಆಡಲಿವೆ.

ಅಂತಿಮ ಪಂದ್ಯದಲ್ಲಿ ಗೆದ್ದರಷ್ಟೇ ಆರ್ಸಿಬಿಗೆ ಟಾಪ್ 2ರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಹಾಗಾಗಿ ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿರುವ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕವೆನಿಸಿದೆ.

ಮುಂಬೈ ಹಾಗೂ ಪಂಜಾಬ್ ನಡುವಣ ಪಂದ್ಯವು ಸೋಮವಾರ (ಇಂದು) ಜೈಪುರದಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡವೂ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಇದರಿಂದಾಗಿ ಸದ್ಯ ಅಗ್ರಸ್ಥಾನದಲ್ಲಿರುವ ಗುಜರಾತ್ಗೆ ಅಗ್ರಸ್ಥಾನ ಕೈತಪ್ಪುವ ಭೀತಿಯೂ ಇದೆ.

ಟಾಪ್-2 ಪ್ರವೇಶಿಸಿದರೆ ಲಾಭ ಏನು?

ಪ್ಲೇ-ಆಫ್ ಹಂತದಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳಿಗೆ ಫೈನಲ್ಗೆ ಪ್ರವೇಶಿಸಲು ಎರಡು ಅವಕಾಶಗಳು ಸಿಗಲಿವೆ. ಮೇ 29ರಂದು ಚಂಡೀಗಡದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ಗೆ ಟಿಕೆಟ್ ಪಡೆಯಲಿದೆ.

ಮತ್ತೊಂದೆಡೆ ಸೋತ ತಂಡಕ್ಕೆ ಇನ್ನೊಂದು ಅವಕಾಶ ಸಿಗಲಿದ್ದು, ಎರಡನೇ ಕ್ವಾಲಿಫೈಯರ್ನಲ್ಲಿ ಆಡುವ ಅವಕಾಶ ಇರಲಿದೆ. ಅಂಕಪಟ್ಟಿಯಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳು ಜೂನ್ 30ರಂದು ನಡೆಯಲಿರುವ ಎಲಿಮೇಟರ್ನಲ್ಲಿ ಮುಖಾಮುಖಿಯಾಗಲಿದೆ. ಇಲ್ಲಿ ಗೆದ್ದ ತಂಡವು ಎರಡನೇ ಕ್ವಾಲಿಫೈಯರ್ಗೆ ತೇರ್ಗಡೆ ಹೊಂದಲಿದೆ.

ಎರಡನೇ ಕ್ವಾಲಿಫೈಯರ್ ಪಂದ್ಯವು ಜೂನ್ 1ರಂದು ನಿಗದಿಯಾಗಿದೆ. ಫೈನಲ್ ಪಂದ್ಯವು ಜೂನ್ 3ರಂದು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಚಂಡೀಗಢದಲ್ಲೂ ಹಾಗೂ ಕ್ವಾಲಿಫೈಯರ್ 2 ಪಂದ್ಯವು ಅಹಮದಾಬಾದ್ನಲ್ಲಿ ನಡೆಯಲಿದೆ.

68ನೇ ಪಂದ್ಯದ ಅಂತ್ಯಕ್ಕೆ ಅಂಕಪಟ್ಟಿ ಇಂತಿದೆ:
.IPL 2025 | MI vs PBKS: ಅಗ್ರಸ್ಥಾನಕ್ಕಾಗಿ ಕಿಂಗ್ಸ್–ಇಂಡಿಯನ್ಸ್ ಹಣಾಹಣಿ .IPL 2025 | SRH vs KKR: ಹೆನ್ರಿಚ್ ಶತಕ, ಸನ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.