ಮಂಗಳವಾರ, ಮೇ 18, 2021
30 °C

ಐಪಿಎಲ್‌ | ಕೆಕೆಆರ್‌ನಿಂದ ಕ್ರಿಸ್ ಲಿನ್ ಕೈ ಬಿಟ್ಟದ್ದು ತಪ್ಪು ನಿರ್ಧಾರ: ಯುವರಾಜ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಲಿನ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದೆ, ಬಿಡುಗಡೆ ಮಾಡಿದ್ದು ಕೊಲ್ಕತ್ತ ನೈಟ್‌ ರೈಡರ್ಸ್‌(ಕೆಕೆಆರ್‌) ತಂಡದ ತಪ್ಪು ನಿರ್ಧಾರ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ನಲ್ಲಿ ಆಡುತ್ತಿರುವ ಎಲ್ಲ ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದವು. ಕೆಕೆಆರ್‌ ಲಿನ್‌ ಮಾತ್ರವಲ್ಲದೆ ಕನ್ನಡಿಗ ರಾಬಿನ್ ಉತ್ತಪ್ಪ ಮತ್ತು ಕೆ.ಸಿ. ಕಾರ್ಯಪ್ಪ ಅವರನ್ನೂ ಬಿಡುಗಡೆ ಮಾಡಿದೆ.

ಲಿನ್‌ ಕುರಿತು ಪ್ರತಿಕ್ರಿಯೆ ನೀಡಿರುವ ಯುವರಾಜ್‌, ‘ಕೆಕೆಆರ್‌ಗೆ ಐಪಿಲ್‌ನ ಹಲವು ಪಂದ್ಯಗಳಲ್ಲಿ ಕ್ರಿಸ್‌ ಉತ್ತಮ ಆರಂಭ ನೀಡಿದ್ದಾರೆ. ಅವರನ್ನು ತಂಡದಲ್ಲಿ ಉಳಿಸಿಕೊಳ್ಳದಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ನನ್ನ ಪ್ರಕಾರ ಇದು ತಪ್ಪು ನಿರ್ಧಾರ. ಕ್ರಿಸ್‌ ಲಿನ್‌ ಈಗ ಅಮೋಘ ಫಾರ್ಮ್‌ನಲ್ಲಿದ್ದಾರೆ’ ಎಂದು ಹೇಳಿದ್ದಾರೆ.

ಫಿಟ್‌ನೆಸ್‌ ಸಮಸ್ಯೆ ಎದುರಿಸುತ್ತಿದ್ದ 37 ವರ್ಷದ ಯುವರಾಜ್‌, 2019ರ  ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೂ ಮೊದಲು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಭಾರತ ಪರ ಆಲ್ರೌಂಡರ್‌ ಆಗಿ ಮಿಂಚಿದ್ದ ಅವರು, 40 ಟೆಸ್ಟ್‌ ಪಂದ್ಯಗಳಿಂದ 1,900 ರನ್‌ ಮತ್ತು 9 ವಿಕೆಟ್‌, 304 ಏಕದಿನ ಪಂದ್ಯಗಳಿಂದ 8,701 ರನ್‌ ಮತ್ತು 111 ವಿಕೆಟ್‌ ಹಾಗೂ 58 ಟಿ20 ಪಂದ್ಯಗಳಿಂದ 1,177 ರನ್‌ ಮತ್ತು 28 ವಿಕೆಟ್‌ ಪಡೆದಿದ್ದರು.

ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ 138 ಪಂದ್ಯಗಳನ್ನು ಆಡಿರುವ ಸಿಂಗ್‌ 1750 ರನ್‌ ಮತ್ತು 36 ವಿಕೆಟ್‌ಗಳನ್ನೂ ಪಡೆದಿದ್ದಾರೆ.

ಸದ್ಯ ಯುವಿ ಟಿ10 ಲೀಗ್‌ 2019ರಲ್ಲಿ ಆಡುತ್ತಿದ್ದು, ಲಿನ್‌ ನಾಯಕತ್ವದ ಮರಾಠ ಅರೇಬಿಯನ್ಸ್‌ ತಂಡದಲ್ಲಿದ್ದಾರೆ.

ಸೋಮವಾರ ಟೀಂ ಅಬುಧಾಬಿ ಎದುರು ನಡೆದ ಟಿ10 ಪಂದ್ಯದಲ್ಲಿ ಲಿನ್‌ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದರು. ಕೇವಲ 30 ಎಸೆತಗಳಲ್ಲಿ 91 ರನ್‌ ಗಳಿಸಿದ್ದರು. ಇದು ಟಿ10 ಕ್ರಿಕೆಟ್‌ನಲ್ಲಿ ದಾಖಲಾದ ವೈಯಕ್ತಿಕ ಅತಿಹೆಚ್ಚು ರನ್‌ ಆಗಿದೆ.

ಪಂದ್ಯದಲ್ಲಿ ಅರೇಬಿಯನ್ಸ್‌ ನಿಗದಿತ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿತ್ತು. ಮೊತ್ತ ಬೆನ್ನಟ್ಟಿದ್ದ ಅಬುಧಾಬಿ 3 ವಿಕೆಟ್‌ ಕಳೆದುಕೊಂಡು 114 ರನ್‌ ಗಳಿಸಿ 24 ರನ್‌ನಿಂದ ಸೋತಿತ್ತು.

ಐಪಿಎಲ್‌ ತಂಡಗಳು ಬಿಡುಗಡೆ ಮಾಡಿದ ಆಟಗಾರರು
ರಾಯಲ್ ಚಾಲೆಂಜರ್ಸ್‌ ಬೆಂಗಳೂರು
ಅಕ್ಷದೀಪ್ ನಾಥ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಡೇಲ್ ಸ್ಟೇಯ್ನ್, ಹೆನ್ರಿಚ್ ಕ್ಲಾಸೆನ್, ಹಿಮ್ಮತ್ ಸಿಂಗ್, ಕುಲವಂತ್ ಕೆಜ್ರೊಲಿಯಾ, ಮಾರ್ಕಸ್ ಸ್ಟೋಯಿನಿಸ್, ಮಿಲಿಂದ್ ಕುಮಾರ್.

ಚೆನ್ನೈ ಸೂಪರ್‌ ಕಿಂಗ್ಸ್‌
ದತ್ತಾತ್ರೇಯ ಬಿಷ್ಣೋಯ್, ಡೇವಿಡ್ ವಿಲ್ಲಿ, ಧ್ರುವ ಶೋರೆ, ಮೋಃಹಿತ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್‌, ಸ್ಕಾಟ್ ಕುಗ್ಲೆಜಿನ್.

ಡೆಲ್ಲಿ ಕ್ಯಾಪಿಟಲ್ಸ್‌
ಅಂಕುಶ್ ಬೇನ್ಸ್‌, ಬಂಡಾರು ಅಯ್ಯಪ್ಪ, ಕ್ರಿಸ್ ಮಾರಿಸ್, ಕಾಲಿನ್ ಇಂಗ್ರಾಮ್, ಕಾಲಿನ್ ಮನ್ರೊ, ಹನುಮವಿಹಾರಿ, ಜಲಜ್ ಸಕ್ಸೆನಾ, ಮಂಜ್ಯೋತ್ ಕಾಲ್ರಾ, ನಾಥು ಸಿಂಗ್

ಕಿಂಗ್ಸ್‌ ಇಲೆವನ್ ಪಂಜಾಬ್
ಅಗ್ನಿವೇಶ್ ಅಯಾಚಿ, ಆ್ಯಂಡ್ರ್ಯೂ ಟೈ, ಡೇವಿಡ್ ಮಿಲ್ಲರ್, ಮೊಯಿಸೆಸ್ ಹೆನ್ರಿಕ್ಸ್‌, ಪ್ರಭಸಿಮ್ರನ್ ಸಿಂಗ್, ಸ್ಯಾಮ್ ಕರನ್, ವರುಣ್ ಚಕ್ರವರ್ತಿ.

ಕೋಲ್ಕತ್ತ ನೈಟ್ ರೈಡರ್ಸ್
ಎನ್ರಿಚ್ ನೊರ್ಟೆ, ಕಾರ್ಲೋಸ್ ಬ್ರೇಥ್‌ವೇಟ್, ಕ್ರಿಸ್ ಲಿನ್, ಜೋ ಡೆನ್ಲಿ, ಕೆ.ಸಿ. ಕಾರ್ಯಪ್ಪ, ಮ್ಯಾಟ್ ಕೆಲ್ಲಿ, ನಿಖಿಲ್ ನಾಯ್ಕ, ಪಿಯೂಷ್ ಚಾವ್ಲಾ, ಪೃಥ್ವಿ ರಾಜ್ ಯರ್ರಾ, ರಾಬಿನ್ ಉತ್ತಪ್ಪ, ಶ್ರೀಕಾಂತ್ ಮುಂಢೆ.

ಮುಂಬೈ ಇಂಡಿಯನ್ಸ್
ಆ್ಯಡಂ ಮಿಲ್ನೆ, ಅಲ್ಜರಿ ಜೋಸೆಫ್, ಬರೀಂದರ್ ಸ್ರಾನ್, ಬೆನ್ ಕಟಿಂಗ್, ಬೆರನ್ ಹೆನ್ರಿಕ್ಸ್‌, ಎವಿನ್ ಲೂಯಿಸ್, ಜೇಸನ್ ಬೆಹ್ರನ್‌ಡಾರ್ಫ್, ಪಂಕಜ್ ಜಸ್ವಾಲ್, ರಸಿಕ್ ದಾರ್, ಯುವರಾಜ್ ಸಿಂಗ್.

ರಾಜಸ್ಥಾನ್ ರಾಯಲ್ಸ್‌
ಆರ್ಯಮನ್ ಬಿರ್ಲಾ, ಆ್ಯಷ್ಟನ್ ಟರ್ನರ್, ಈಶ್ ಸೋಧಿ, ಜಯದೇವ್ ಉನದ್ಕತ್, ಲಿಯಾಮ್ ಲಿವಿಂಗ್‌ಸ್ಟೋನ್, ಓಷೇನ್ ಥಾಮಸ್, ಪ್ರಶಾಂತ್ ಚೋಪ್ರಾ , ರಾಹುಲ್ ತ್ರಿಪಾಠಿ, ಶುಭಂ ರಾಂಜಣೆ, ಸ್ಟುವರ್ಟ್ ಬಿನ್ನಿ, ಸುದೇಶ್ಣ್ ಮಿಥುನ್.

ಸನ್‌ರೈಸರ್ಸ್‌ ಹೈದರಾಬಾದ್
ದೀಪಕ್ ಹೂಡಾ, ಮಾರ್ಟಿನ್ ಗಪ್ಟಿಲ್, ರಿಕಿ ಭುಯ್, ಶಕೀಬ್ ಅಲ್ ಹಸನ್, ಯೂಸುಫ್ ಪಠಾಣ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು