ಗುರುವಾರ , ಅಕ್ಟೋಬರ್ 29, 2020
26 °C

IPL-2020 | ಕಿಂಗ್ಸ್ ಆಲ್‌ರೌಂಡ್ ಪ್ರದರ್ಶನ; ಆರ್‌ಸಿಬಿಗೆ 97 ರನ್ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಆಲ್‌ರೌಂಡ್‌ ಪ್ರದರ್ಶನ ತೋರಿದ ಕಿಂಗ್ಸ್‌ ಇಲವೆನ್ ಪಂಜಾಬ್‌ ತಂಡ‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ 97 ರನ್‌ ಅಂತರದ ಬಾರೀ ಗೆಲುವು ಸಾಧಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್‌ ಪರ ನಾಯಕ ರಾಹುಲ್‌ ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 69 ಎಸೆತಗಳನ್ನು ಎದುರಿಸಿದ ಅವರು 14 ಬೌಂಡರಿ ಮತ್ತು 7 ಸಿಕ್ಸರ್ 132 ರನ್‌ ಗಳಿಸಿದರು. ಇದು ಐಪಿಎಲ್‌ನಲ್ಲಿ ಭಾರತದ ಪರ ಗರಿಷ್ಠ ಮೊತ್ತ ಮತ್ತು ಯಾವುದೇ ತಂಡದ ನಾಯಕನಿಂದ ಮೂಡಿ ಬಂದ ಗರಿಷ್ಠ ಸ್ಕೋರ್‌ ಆಗಿದೆ. ಜೊತೆಗೆ ಇದು ಐಪಿಎಲ್‌ನಲ್ಲಿ ರಾಹುಲ್‌ಗೆ 2ನೇ ಶತಕವಾಗಿದ್ದು, ಈ ಬಾರಿ ಐಪಿಎಲ್‌ನಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ.

ಹೀಗಾಗಿ ಪಂಜಾಬ್‌ ಪಡೆ ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಡು 206 ರನ್‌ ಕಲೆಹಾಕಿತು. ಈ ಮೊತ್ತದೆದರು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ನಿರಂತರವಾಗಿ ವಿಕೆಟ್‌ ಕಳೆದುಕೊಂಡದ್ದರಿಂದಾಗಿ ಕೇವಲ 109 ರನ್‌ಗಳಿಗೆ ಆಲೌಟ್ ಆಗಬೇಕಾಯಿತು. ಈ ತಂಡದ ಪರ ವಾಷಿಂಗ್ಟನ್‌ ಸುಂದರ್‌ (30), ಎಬಿ ಡಿ ವಿಲಿಯರ್ಸ್‌ (28), ಆ್ಯರನ್‌ ಫಿಂಚ್ (20) ಹಾಗೂ ಶಿವಂ ದುಬೆ (12) ಹೊರತುಪಡಿಸಿ ಉಳಿದವರ್ಯಾರೂ ಎರಡಂಕಿ ಮುಟ್ಟಲಿಲ್ಲ.

ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ, ಮುರುಗನ್‌ ಅಶ್ವಿನ್‌ ತಲಾ ಮೂರು ವಿಕೆಟ್‌ ಪಡೆದರೆ, ಶೇಲ್ಡನ್‌ ಕಾರ್ಟ್ರೆಲ್‌ 2 ವಿಕೆಟ್‌ ಕಬಳಿಸಿದರು. ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ಕೆಎಲ್‌ಗೆ 2 ಸಾವಿರ ರನ್
ರಾಹುಲ್‌ ಈ ಪಂದ್ಯದಲ್ಲಿ 2 ರನ್‌ ಗಳಿಸಿದಾಗ ಐಪಿಎಲ್‌ನಲ್ಲಿ 2 ಸಾವಿದ ರನ್‌ ಪೂರೈಸಿದ ಸಾಧನೆ ಮಾಡಿದರು. ಇದರೊಂದಿಗೆ ವೇಗವಾಗಿ 2 ಸಾವಿರ ರನ್‌ ಪೂರೈಸಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿದರು. ಇದು ರಾಹುಲ್‌ಗೆ 60ನೇ ಇನಿಂಗ್ಸ್‌.

ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್‌ (48) ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾದ ಶಾನ್‌ ಮಾರ್ಸ್ (52)‌ ಎರಡನೇ ಸ್ಥಾನದಲ್ಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು