ಬುಧವಾರ, ಅಕ್ಟೋಬರ್ 21, 2020
21 °C

IPL-2020 | SRH vs RR: ರಾಯಲ್ಸ್‌ಗೆ ಗೆಲುವು ತಂದುಕೊಟ್ಟ ರಾಹುಲ್–ರಿಯಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರೂ ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ರಾಹುಲ್‌ ತೆವಾಟಿಯಾ ಮತ್ತು ರಿಯಾನ್ ಪರಾಗ್‌ ಜೋಡಿ ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟಿತು.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾರ್‌ ತಂಡ ನಾಯಕ ಡೇವಿಡ್‌ ವಾರ್ನರ್‌ ಮತ್ತು ಮನೀಷ್ ಪಾಂಡೆ ಗಳಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 158 ರನ್‌ ಕಲೆಹಾಕಿತ್ತು.

ವಾರ್ನರ್‌ 38 ಎಸೆತಗಳಲ್ಲಿ 48 ರನ್‌ ಗಳಿಸಿದರೆ, ಪಾಂಡೆ 44 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 54 ರನ್‌ ಬಾರಿಸಿದರು.

ಗುರಿ ಬೆನ್ನತ್ತಿದ ರಾಯಲ್ಸ್‌, ತಂಡದ ಮೊತ್ತ 78 ರನ್‌ ಆಗುವಷ್ಟರಲ್ಲಿ ಪ್ರಮುಖ 5 ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿಕೊಂಡಿದ್ದರು. ನಾಯಕ ಸ್ಟೀವ್‌ ಸ್ಮಿತ್‌ (5), ಬೆನ್‌ ಸ್ಟೋಕ್ಸ್‌ (5), ಜಾಸ್‌ ಬಟ್ಲರ್‌ (16) ಬೇಗನೆ ನಿರ್ಗಮಿಸಿದ್ದರು. 4ನೇ ವಿಕೆಟ್‌ಗೆ 37 ರನ್‌ ಜೊತೆಯಾಟವಾಡಿದ್ದ ರಾಬಿನ್‌ ಉತ್ತಪ್ಪ (18) ಹಾಗೂ ಸಂಜು ಸ್ಯಾಮ್ಸನ್‌ (26) ಅವರೂ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾಗಿದ್ದರು.

ಈ ವೇಳೆ ಜೊತೆಯಾದ ರಿಯಾನ್‌ ಮತ್ತು ತೆವಾಟಿಯಾ ಜೋಡಿ ಜಯವನ್ನು ರೈಸರ್ಸ್‌ ಕೈಯಿಂದ ಕಸಿದುಕೊಂಡಿತು. ಈ ಇಬ್ಬರೂ ಕೇವಲ 47 ಎಸೆತಗಳಲ್ಲಿ 85 ರನ್‌ ಬಾರಿಸಿದರು. ತೆವಾಟಿಯಾ 28 ಎಸೆತಗಳಲ್ಲಿ 4 ಸಿಕ್ಸರ್‌ ಮತ್ತು 2 ಬೌಂಡರಿ ಸಹಿತ 45 ರನ್‌ ಗಳಿಸಿದರೆ, ರಿಯಾನ್‌ 26 ಎಸೆತಗಳಲ್ಲಿ 42 ರನ್‌ ಬಾರಿಸಿದರು. ಹೀಗಾಗಿ ರಾಯಲ್ಸ್‌ ಪಡೆ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ 163 ರನ್‌ ಗಳಿಸಿ 5 ವಿಕೆಟ್‌ ಅಂತರದ ಜಯ ಸಾಧಿಸಿತು.

ಕಳೆದ 4 ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಯಲ್ಸ್‌ ಈ ಪಂದ್ಯದ ಮೂಲಕ ಜಯದ ಹಳಿಗೆ ಮರಳಿದೆ. ರೈಸರ್ಸ್‌ ಹಾಗೂ ರಾಯಲ್ಸ್‌ ಟೂರ್ನಿಯಲ್ಲಿ‌ ಇದುವರೆಗೆ ತಲಾ 7 ಪಂದ್ಯಗಳನ್ನು ಆಡಿದ್ದು, 3 ಗೆಲುವು ಸಾಧಿಸಿ ಕ್ರಮವಾಗಿ 6 ಮತ್ತು 7ನೇ ಸ್ಥಾನಗಳಲ್ಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು