ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಸನ್‌ರೈಸರ್ಸ್‌ ಮುಳುವಾದ ಗಾಯದ ಸಮಸ್ಯೆ; ಆರ್‌ಸಿಬಿಗೆ 10 ರನ್ ಜಯ

Last Updated 21 ಸೆಪ್ಟೆಂಬರ್ 2020, 18:47 IST
ಅಕ್ಷರ ಗಾತ್ರ

ದುಬೈ:ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ಬೆಂಗಳೂರು (ಆರ್‌ಸಿಬಿ) ತಂಡ 10 ರನ್‌ಗಳ ಗೆಲುವು ಸಾಧಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿಕನ್ನಡಿಗ ದೇವದತ್ತ ಪಡಿಕ್ಕಲ್ (56) ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್‌ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 163 ರನ್‌ ಗಳಿಸಿತು.

ಪಡಿಕ್ಕಲ್‌42ಎಸೆತಗಳಲ್ಲಿ 8ಬೌಂಡರಿ ಸಹಿತ 56ರನ್‌ ಸಿಡಿಸಿದರೆ,ವಿಲಿಯರ್ಸ್‌ 30ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 51 ರನ್‌ಚಚ್ಚಿದರು.

‌ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಪರ ಜಾನಿ ಬೆಸ್ಟೋ ಬಿರುಸಿನ ಬ್ಯಾಟಿಂಗ್ ನಡೆಸಿದರು. ಸಿಕ್ಕಮೂರು ಜೀವದಾನಗಳ ಲಾಭ ಪಡೆದು ಅರ್ಧಶತಕ ಸಿಡಿಸಿದ ಬೇಸ್ಟೊ ತಮ್ಮ ತಂಡಕ್ಕೆ ಸುಲಭ ಗೆಲುವು ತಂದುಕೊಡುವ ವಿಶ್ವಾಸ ಮೂಡಿಸಿದ್ದರು. ಅದಕ್ಕೆ ಸ್ಪಿನ್ನರ್‌ ಚಾಹಲ್‌ ಅವಕಾಶ ನೀಡಲಿಲ್ಲ.

ತಿರುವು ನೀಡಿದ ಚಾಹಲ್‌
ಹೈದರಾಬಾದ್‌ ತಂಡ 15 ಓವರ್‌ಗಳ ಆಟ ಮುಕ್ತಾಯವಾದಾಗಕೇವಲ 2 ವಿಕೆಟ್‌ ಕಳೆದುಕೊಂಡು 121 ರನ್‌ ‌ಗಳಿಸಿ ಸುಸ್ಥಿತಿಯಲ್ಲಿತ್ತು. ಅರ್ಧಶತಕ ಬಾರಿಸಿದ್ದ ಬೇಸ್ಟೊ ಕ್ರೀಸ್‌ನಲ್ಲಿದ್ದರು. ಹೀಗಾಗಿ ಸನ್‌ರೈಸರ್ಸ್‌ ತಂಡಹೀಗಾಗಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು.

ಆದರೆ, 16ನೇ ಓವರ್‌ ಬೌಲಿಂಗ್ ಮಾಡಿದ ಚಾಹಲ್‌ ಎರಡು ಮತ್ತು ಮೂರನೇ ಎಸೆತಗಳಲ್ಲಿ ಕ್ರಮವಾಗಿ ಬೇಸ್ಟೊ ಹಾಗೂ ವಿಜಯ್‌ ಶಂಕರ್‌ ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಬೇಸ್ಟೋ ವಿಕೆಟ್‌ ಪತನದ ಬಳಿಕ ಹೈದರಾಬಾದ್‌ ನಿರಂತರವಾಗಿ ವಿಕೆಟ್‌ ಕಳೆದುಕೊಂಡಿತು.

ದುಬಾರಿಯಾದ ಗಾಯದ ಸಮಸ್ಯೆ
ತಂಡದ ಪ್ರಮುಖ ಆಲ್‌ರೌಂಡರ್‌ ಮಿಷೇಲ್‌ ಮಾರ್ಷ್‌‌ಬೌಲಿಂಗ್ ಮಾಡುವ ವೇಳೆ ಗಾಯಗೊಂಡು ಮೈದಾನ ತೊರೆದಿದ್ದರು. ಜೊತೆಗೆಗುರಿ ಬೆನ್ನತ್ತುವ ವೇಳೆ 17ನೇ ಓವರ್‌ನಲ್ಲಿ ರನ್‌ಗಾಗಿ ಓಡುವಾಗ ಅಭಿಷೇಕ್‌ ಶರ್ಮಾ ಮತ್ತು ರಶೀದ್ ಖಾನ್‌ ಡಿಕ್ಕಿ ಹೊಡೆದುಕೊಂಡರು. ಈ ವೇಳೆ ರಶೀದ್‌ ಖಾನ್‌ ತಲೆಗೆ ಪೆಟ್ಟಾಯಿತು. ಇವುಹೈದರಾಬಾದ್‌ಗೆ ದುಬಾರಿಯಾದವು.

ಅಂತಿಮವಾಗಿ ಡೇವಿಡ್‌ ವಾರ್ನರ್‌ ಪಡೆ 19.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 153 ರನ್‌ಗಳಿಸಲಷ್ಟೇ ಶಕ್ತವಾಯಿತು.

ಮೂರು ವಿಕೆಟ್‌ ಪಡೆದ ಚಾಹಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ನವದೀಪ್‌ ಶೈನಿ ಹಾಗೂ ದುಬೆ ತಲಾ ಎರಡು ವಿಕೆಟ್‌ ಪಡೆದರೆ,ಡೇಲ್‌ ಸ್ಟೇಯ್ನ್‌ ಒಂದು ವಿಕೆಟ್‌ ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT