ನಾಗ್ಪುರ: ಸ್ಪಿನ್ನರ್ ಹರ್ಷ್ ದುಬೆ ಹಾಗೂ ವೇಗಿ ಯಶ್ ಠಾಕೂರ್ ಅವರ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ವಿದರ್ಭ ತಂಡವು ರೆಸ್ಟ್ ಆಫ್ ಇಂಡಿಯಾ ವಿರುದ್ಧ 93 ರನ್ಗಳ ಗೆಲುವು ದಾಖಲಿಸುವ ಮೂಲಕ ಇರಾನಿ ಕಪ್ ಮುಡಿಗೇರಿಸಿಕೊಂಡಿದೆ.

361 ರನ್ಗಳ ಕಠಿಣ ಗುರಿ ಬೆನ್ನತ್ತಿದ ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಬ್ಯಾಟರ್ ಯಶ್ ದುಲ್ (92 ರನ್) ನೆರವಾದರೂ ಕೂಡ, ಹರ್ಷ್ ದುಬೆ (4 ವಿಕೆಟ್) ಯಶ್ ಠಾಕೂರ್ (2 ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಗೆ 267 ರನ್ ಗಳಿಸಲಷ್ಟೇ ಶಕ್ತವಾಯಿತು.

7ನೇ ವಿಕೆಟ್ಗೆ ಮಾನವ್ ಸುತಾರ್(56 ರನ್) ಜತೆಗೂಡಿದ ಯಶ್ ದುಲ್ ಅವರು 104 ರನ್ಗಳ ಜತೆಯಾಟ ಆಡುವ ಮೂಲಕ, ವಿದರ್ಭ ಬೌಲರ್ಗಳನ್ನು ಕಾಡಿದರು. ಯಶ್ ಠಾಕೂರ್ ಅವರು ಯಶ್ ದುಲ್ ವಿಕೆಟ್ ಪಡೆಯುವ ಮೂಲಕ ವಿದರ್ಭ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು.

ಮೊದಲ ಇನ್ನಿಂಗ್ಸ್ನಲ್ಲಿ 143 ರನ್ ಗಳಿಸಿದ್ದ ಅಥರ್ವ ತೈಡೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.