ನವದೆಹಲಿ: 2019ರ ಏಕದಿನ ವಿಶ್ವಕಪ್ ಬಳಿಕ ತಂಡದಲ್ಲಿ ಕಾಣಿಸಿಕೊಳ್ಳದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಬಿಸಿಸಿಐಇತ್ತೀಚೆಗೆ ಪ್ರಕಟಿಸಿದ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈ ಬಿಟ್ಟಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಕನ್ನಡಿಗ ಕೆ.ಎಲ್.ರಾಹುಲ್ ಮಿಂಚಿತ್ತಿರುವುದರಿಂದಧೋನಿ ತಂಡಕ್ಕೆ ಮರಳುವ ಬಗ್ಗೆ ಮತ್ತಷ್ಟು ಅನುಮಾನಗಳು ಮೂಡಿವೆ.

ನಿವೃತ್ತಿಯ ಬಗ್ಗೆ ಅಥವಾ ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ಧೋನಿ ಯಾವುದೇ ಹೇಳಿಕೆ ನೀಡದಿರುವುದು ಹಲವು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ. ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಈ ಕುರಿತು ಪ್ರತಿಕ್ರಿಯಿಸಿದ್ದು, ಧೋನಿ ಭಾರತ ತಂಡಕ್ಕೆ ವಾಪಸ್ ಆಗುವುದು ಕಷ್ಟ. ಆದರೆ, ಐಪಿಎಲ್‌ನಲ್ಲಿ ಅವರು ನೀಡುವ ಪ್ರದರ್ಶನ ಮುಖ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವಕಪಿಲ್, ‘ದೀರ್ಘಕಾಲಕ್ರಿಕೆಟ್ ಆಡದೇ ಇರುವುದರಿಂದ, ಅವರು ತಂಡಕ್ಕೆ ವಾಪಸ್ ಆಗಬಲ್ಲರು ಎಂದು ನನಗನಿಸುತ್ತಿಲ್ಲ.ಆದರೆ, ಅವರ ಮುಂದೆ ಐಪಿಎಲ್ ಇದೆ. ಅಲ್ಲಿ ಅವರ ಪ್ರದರ್ಶನಮುಖ್ಯವಾಗುತ್ತದೆ. ಆಯ್ಕೆಗಾರರು ದೇಶಕ್ಕೆ ಒಳಿತಾಗುವುದನ್ನು ನೋಡುತ್ತಾರೆ. ಧೋನಿ ದೇಶಕ್ಕಾಗಿ ಸಾಕಷ್ಟು ನೀಡಿದ್ದಾರೆ. ಆದರೆ, ಅವರು6–7 ತಿಂಗಳಿನಿಂದ ದೂರ ಉಳಿದಿರುವುದರಿಂದ, ಎಲ್ಲರ ಮನಸ್ಸಿನಲ್ಲೂ ಅನುಮಾನ ಉಳಿದಿದೆ. ಅದು ಸಾಕಷ್ಟು ಚರ್ಚೆಗಳನ್ನೂ ಹುಟ್ಟುಹಾಕಿದೆ’ ಎಂದಿದ್ದಾರೆ.

ತಂಡಕ್ಕೆ ವಾಪಸ್ ಆಗುವ ವಿಚಾರ ಅವರ ಪ್ರದರ್ಶನದ ಮೇಲೆ ನಿಂತಿದೆ ಎಂದಿರುವ ಕಪಿಲ್, ‘ಧೋನಿ ತಂಡಕ್ಕೆ ಮರಳುವ ವಿಚಾರವು ಐಪಿಎಲ್‌ನಲ್ಲಿ ಬೇರೆಲ್ಲ ವಿಕೆಟ್ ಕೀಪರ್‌ಗಳು ಹೇಗೆ ಪ್ರದರ್ಶನ ನೀಡುತ್ತಾರೆ, ಧೋನಿಹೇಗೆ ಆಡುತ್ತಾರೆ ಎಂಬುದರ ಮೇಲೆ ನಿಂತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.