ಕ್ವಾಲಾಲಂಪುರ: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 19 ವರ್ಷದೊಳಗಿನವರ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.

ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ಎಡಗೈ ಸ್ಪಿನ್ನರ್ಗಳಾದ ಪರುಣಿಕಾ ಸಿಸೊಡಿಯಾ (21ಕ್ಕೆ3) ಮತ್ತು ವೈಷ್ಣವಿ ಶರ್ಮಾ(23ಕ್ಕೆ3) ಅವರ ಪರಿಣಾಮಕಾರಿ ದಾಳಿಯ ಬಲದಿಂದ ಭಾರತ ತಂಡವುಉ 9 ವಿಕೆಟ್ಗಳಿಂದ ಇಂಗ್ಲೆಂಡ್ ವಿರುದ್ಧ ಗೆದ್ದಿತು.

ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪರುಣಿಕಾ ಮತ್ತು ವೈಷ್ಣವಿ ಅವರ ದಾಳಿಯ ಮುಂದೆ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 112 ರನ್ಗಳ ಸಾಧಾಣ ಮೊತ್ತ ಕಲೆಹಾಕಿತು.

ಗುರಿ ಬೆನ್ನಟ್ಟಿದ ಭಾರತ ತಂಡವು 15 ಓವರ್ಗಳಲ್ಲಿ 1 ವಿಕೆಟ್ಗೆ 117 ರನ್ ಗಳಿಸಿತು. ಜಿ. ಕಮಲಿನಿ (ಔಟಾಗದೆ 56; 50ಎ, 4X8) ಅವರ ಅರ್ಧಶತಕದ ಬಲದಿಂದ ಇನಿಂಗ್ಸ್ನಲ್ಲಿ ಇನ್ನೂ 5 ಓವರ್ಗಳು ಬಾಕಿಯಿದ್ದಾಗಲೇ ಜಯ ಗಳಿಸಿತು.

ಇನ್ನೊಂದು ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್ಗಳಿಂದ ಆಸ್ಟ್ರೇಲಿಯಾ ಎದುರು ಜಯಿಸಿತು. ತ್ರಿಷಾ ಅವರು 29 ಎಸೆತಗಳಲ್ಲಿ 35 ರನ್ ಗಳಿಸಿದರು.

ಫೆಬ್ರುವರಿ 2ರಂದು ಬೆಯುಮಾಸ್ ಒವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ನಲ್ಲಿ ಉಭಯ ತಂಡಗಳು ಸೆಣಸಲಿವೆ.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ : 20 ಓವರ್ಗಳಲ್ಲಿ 8ಕ್ಕೆ113 (ದವಿನಾ ಪೆರಿನ್ 45, ಅಬಿ ನೊರ್ಗ್ರೋವ್ 30,ಆಯುಷಿ ಶುಕ್ಲಾ 21ಕ್ಕೆ2, ಪರುಣಿಕಾ ಸಿಸೊಡಿಯಾ 21ಕ್ಕೆ3, ವೈಷ್ಣವಿ ಶರ್ಮಾ 23ಕ್ಕ3) ಭಾರತ: 15 ಓವರ್ಗಳಲ್ಲಿ 1 ವಿಕೆಟ್ಗೆ 117 (ಜಿ. ಕಮಲಿನಿ ಔಟಾಗದೆ 56, ಜಿ. ತ್ರಿಷಾ 35, ಪೋಬೆ ಬ್ರೆಟ್ 31ಕ್ಕೆ1) ಫಲಿತಾಂಶ:ಭಾರತ ತಂಡಕ್ಕೆ 9 ವಿಕೆಟ್ಗಳ ಜಯ. ಪಂದ್ಯದ ಆಟಗಾರ್ತಿ: ಪರುಣಿಕಾ ಸಿಸೊಡಿಯಾ

ಆಸ್ಟ್ರೇಲಿಯಾ: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 105 (ಕಾಮೆ ಬ್ರಯಾ 36,ಎಲಿಯಾ ಬ್ರೆಸೊಸಿ ಔಟಾಗದೆ 27, ಆಷ್ಲೆ ವ್ಯಾನ್ ವೈಕ್ 17ಕ್ಕೆ4) ದಕ್ಷಿಣ ಆಫ್ರಿಕಾ: 18.1 ಓವರ್ಗಳಲ್ಲಿ 5ಕ್ಕೆ106 (ಜೆಮಾ ಬೋತಾ 37, ಕಾಯ್ಲಾ ರೆನೆಕೆ 26, ಕರಾಬೊ ಮೆಸೊ 19,ಹಸ್ರತ್ ಗಿಲ್ 20ಕ್ಕೆ2, ಲೂಸಿ ಹ್ಯಾಮಿಲ್ಟನ್ 17ಕ್ಕೆ2) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 5 ವಿಕೆಟ್ಗಳಿಗೆ ಜಯ. ಪಂದ್ಯದ ಆಟಗಾರ್ತಿ: ಆಷ್ಲೆ ವ್ಯಾನ್ ವೈಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.