ವಡೋದರ: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಕರ್ನಾಟಕ ತಂಡ 36 ರನ್ಗಳಿಂದ ಪರಾಭವಗೊಳಿಸುವ ಮೂಲಕ ಜಯ ಸಾಧಿಸಿದೆ. ಆ ಮೂಲಕ 5ನೇ ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ.

ಟಾಸ್ ಗೆದ್ದಿರುವ ವಿದರ್ಭ ತಂಡ, ಎದುರಾಳಿ ಕರ್ನಾಟಕವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.

ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಕರ್ನಾಟಕ ಪರ ಸಮರನ್ ರವಿಚಂದ್ರನ್ ಭರ್ಜರಿ ಶತಕ (101) ಸಿಡಿಸಿದರು. ಶ್ರೀಜಿತ್ 78, ಅಭಿನವ್ ಮನೋಹರ್ 79 ರನ್ ಬಾರಿಸುವ ಮೂಲಕ ಕರ್ನಾಟಕ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.

ವಿದರ್ಭ ಪರ ನಚಿಕೇತ್. ದರ್ಶನ್ ತಲಾ 2 ವಿಕೆಟ್ ಪಡೆದರು.

ಕರ್ನಾಟಕದ ಬೃಹತ್ ಗುರಿಯನ್ನು ಬೆನ್ನಟ್ಟಿದ ವಿದರ್ಭ 48.2 ಓವರ್ಗಳಲ್ಲಿ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡ 312ರನ್ಗಳನ್ನಷ್ಟೇ ಗಳಿಸಿ ಪರಾಭವಗೊಂಡಿತು. ಹರ್ಷ ದುಬೇ 30 ಎಸೆತಗಳಲ್ಲಿ 63 ರನ್ಗಳಿಸಿದರು.

ವಿಜಯ್ ಹಜಾರೆ ಟ್ರೋಫಿಯನ್ನು ತಮಿಳುನಾಡು ತಂಡ 5ನೇ ಬಾರಿ ಪಡೆದು ದಾಖಲಿ ನಿರ್ಮಿಸಿತ್ತು. ಇದೀಗ ಕರ್ನಾಟಕ ತಂಡವೂ 5 ಬಾರಿ ಈ ಟ್ರೋಫಿಯನ್ನು ಪಡೆದ ಸಾಧನೆ ಮಾಡಿದೆ.
.Vijay Hazare Trophy Final: ಕರ್ನಾಟಕಕ್ಕೆ ಕರುಣ್ ಕಟ್ಟಿಹಾಕುವ ಸವಾಲು.Vijay Hazare Trophy | ಫೈನಲ್ನಲ್ಲಿ ಕರುಣ್ ನಾಯರ್–ಕರ್ನಾಟಕ ಮುಖಾಮುಖಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.