ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾನ್ ಕಾರ್ಡ್ ಕಳೆದುಕೊಂಡು ಪೀಟರ್ಸನ್ ಅಳಲು: ನೆರವಿಗೆ ಧಾವಿಸಿದ ಐಟಿ ಇಲಾಖೆ

Last Updated 15 ಫೆಬ್ರುವರಿ 2022, 16:21 IST
ಅಕ್ಷರ ಗಾತ್ರ

ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಟೆಲಿವಿಜನ್ ವೀಕ್ಷಕ ವಿವರಣೆಯಲ್ಲಿ ಸದಾ ಮಿಂಚುವ ಕೆವಿನ್ ಪೀಟರ್ಸನ್ ತಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡು ಭಾರತ ಸರ್ಕಾರದ ನೆರವು ಕೇಳಿದ್ದಾರೆ. ಭಾರತದ ತೆರಿಗೆ ಇಲಾಖೆಯು ಅವರ ಮನವಿಗೆ ಸ್ಪಂದಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೆವಿನ್, ‘ಇಂಡಿಯಾ ಪ್ಲೀಸ್ ಹೆಲ್ಪ್ ಮಿ.. ನನ್ನ ಪ್ಯಾನ್ ಕಾರ್ಡ್ ಅನ್ನು ಎಲ್ಲಿಯೊ ಇಟ್ಟು ಮರೆತುಬಿಟ್ಟಿದ್ದೇನೆ. ಸೋಮವಾರ ಭಾರತಕ್ಕೆ ಪ್ರಯಾಣಿಸುತ್ತಿದ್ದೇನೆ. ಅಲ್ಲಿ ನನ್ನ ಕೆಲಸಕ್ಕೆ ಭೌತಿಕ ಕಾರ್ಡ್ ಬೇಕಿದೆ. ಈ ಬಗ್ಗೆ ನಾನು ಯಾರನ್ನು ಸಂಪರ್ಕಿಸಬೇಕು? ಯಾರಾದರೂ ಆದಷ್ಟು ಬೇಗ ನನಗೆ ಸಲಹೆ ನೀಡಿ’ ಎಂದು ಕೇಳಿಕೊಂಡಿದ್ದರು.

ಪೀಟರ್ಸನ್ ಮನವಿಗೆ ಕೂಡಲೇ ಸ್ಪಂದಿಸಿರುವ ಆದಾಯ ತೆರಿಗೆ ಇಲಾಖೆ, ಪ್ಯಾನ್ ಕಾರ್ಡ್‌ ಪಡೆಯಲು ಅನುಸರಿಸಬೇಕಾದ ನಿಯಮಗಳನ್ನು ಟ್ವೀಟ್ ಮೂಲಕ ವಿವರಿಸಿದೆ.

ಆತ್ಮೀಯ ಕೆವಿನ್ ಪೀಟರ್ಸನ್, ನಾವು ನಿಮಗೆ ಸಹಾಯ ಮಾಡಲು ಸಿದ್ಧರಿದ್ದೇವೆ. ನಿಮ್ಮ ಬಳಿ ಪ್ಯಾನ್ ಕಾರ್ಡ್ ಮಾಹಿತಿ ಇದ್ದರೆ ಈ ಲಿಂಕ್ ಕ್ಲಿಕ್ ಮಾಡಿ. ಭೌತಿಕ ಪಾನ್ ಕಾರ್ಡ್ ರೀಪ್ರಿಂಟ್‌ಗಾಗಿ ನಿಯಮಗಳನ್ನು ಅನುಸರಿಸಿ ಎಂದು ತಿಳಿಸಿದೆ.

https://tin-nsdl.com/services/pan/pan-index.html…
https://pan.utiitsl.com/PAN/mainform.html"

ಒಂದೊಮ್ಮೆ ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿ ನಿಮ್ಮ ಬಳಿ ಇಲ್ಲವಾದರೆ adg1.systems@incometax.gov.in & jd.systems1.1@incometax.gov.inಗೆ ಮೇಲ್ ಮಾಡಿ ಹೊಸ ಭೌತಿಕ ಪ್ಯಾನ್ ಕಾರ್ಡ್‌ಗೆ ಮನವಿ ಸಲ್ಲಿಸಿ ಎಂದು ತಿಳಿಸಲಾಗಿದೆ.

ಟ್ವೀಟ್ ಮೂಲಕ ತಮ್ಮ ಮನವಿಗೆ ಸ್ಪಂದಿಸಿದ ಆದಾಯ ತೆರಿಗೆ ಇಲಾಖೆಗೆ ಧನ್ಯವಾದ ಹೇಳಿರುವ ಪೀಟರ್ಸನ್, ‘ಅದ್ಬುತ, ನಿಮಗೆ ಧನ್ಯವಾದ, ನಾನು ನಿಮಗೆ ಇಮೇಲ್ ಮಾಡಿದ್ದೇನೆ. ನಿಮ್ಮ ಸಂಪರ್ಕ ಸಂಖ್ಯೆಯನ್ನು ನನಗೆ ಡಿಎಂ ಮಾಡಿದರೆ ನಾನು ನಿಮ್ಮೊಂದಿಗೆ ಮಾತನಾಡಬಹುದು’ಎಂದು ಮನವಿ ಮಾಡಿದ್ದಾರೆ.

ಕಳೆದ ಕೆಲವು ಆವೃತ್ತಿಗಳಿಂದ ಪೀಟರ್ಸನ್ ಐಪಿಎಲ್‌ನ ವೀಕ್ಷಕ ವಿವರಣೆಗಾರರಾಗಿ ತೊಡಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ, ಡೆಲ್ಲಿ ಡೇರ್‌ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್, ಡೆಕ್ಕನ್ ಚಾರ್ಜರ್ಸ್ ಮತ್ತು ಪುಣೆ ಸೂಪರ್‌ಜೈಂಟ್ಸ್ ತಂಡಗಳಲ್ಲಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT