ನವದೆಹಲಿ: ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ.

ಇದೇ ತಿಂಗಳು ನ್ಯೂಜಿಲೆಂಡ್ ಎದುರು ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಶನಿವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯು ಪ್ರಕಟಿಸಿರುವ ತಂಡದಲ್ಲಿ ಅವರು ಸ್ಥಾನ ಗಳಿಸಿದ್ದಾರೆ. ವಿಕೆಟ್ಕೀಪರ್ ರಿಷಭ್ ಪಂತ್ ಅವರಿಗೂ ಮತ್ತೊಂದು ಅವಕಾಶ ದೊರೆತಿದೆ. ಆದರೆ ಕನ್ನಡಿಗ ಕೆ.ಎಲ್.ರಾಹುಲ್ ಮೊದಲ ಆದ್ಯತೆ ವಿಕೆಟ್ಕೀಪರ್ ಆಗಿದ್ದಾರೆ.

ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನೂ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಅವರ ಫಿಟ್ನೆಸ್ ಕುರಿತು ಬಿಸಿಸಿಐ ಸಿಒಇಯಿಂದ ಹಸಿರು ನಿಶಾನೆ ದೊರೆಯಬೇಕಿದೆ. ಅವರು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಜನವರಿ 6ರಂದು ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡದಲ್ಲಿ ಆಡಲಿದ್ದಾರೆ. ಆ ಪಂದ್ಯವು ಅವರ ಫಿಟ್ನೆಸ್ ಪರೀಕ್ಷೆಗೆ ವೇದಿಕೆಯಾಗಲಿದೆ.

ಹೈದರಾಬಾದಿನ ಸಿರಾಜ್ ಅವರನ್ನೂ ಈಚೆಗೆ ನಡೆದ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಆಯ್ಕೆ ಮಾಡಿರಲಿಲ್ಲ. ನಿರೀಕ್ಷೆಯಂತೆ ನ್ಯೂಜಿಲೆಂಡ್ ಎದುರಿನ ಸರಣಿಗೆ ವೇಗಿ ಜಸ್ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಕುರಿತು ಬಿಸಿಸಿಐ–ಸಿಒಇ ಇನ್ನೂ ಸ್ಪಷ್ಟತೆ ನೀಡಿಲ್ಲ. ಅವರು ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಲು ಸಮರ್ಥರೆಂಬುದರ ಕುರಿತು ಹಸಿರು ನಿಶಾನೆ ದೊರೆತಿಲ್ಲ. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಶತಕ ಗಳಿಸಿದ್ದ ಋತುರಾಜ್ ಗಾಯಕವಾಡ್ ಅವರನ್ನೂ ಆಯ್ಕೆಗೆ ಪರಿಗಣಿಸಿಲ್ಲ. ರಾಯಪುರದ ಪಂದ್ಯದಲ್ಲಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಿ 83 ಎಸೆತಗಳಲ್ಲಿ 105 ರನ್ ಗಳಿಸಿದ್ದರು. ಆ ಸರಣಿಯಲ್ಲಿ ರಾಹುಲ್ ತಂಡದ ನಾಯಕತ್ವ ವಹಿಸಿದ್ದರು.

ತಿಲಕ್ ವರ್ಮಾ ಮತ್ತು ಧ್ರುವ ಜುರೇಲ್ ಅವರಿಗೂ ಸ್ಥಾನ ಲಭಿಸಿಲ್ಲ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೂ ಆಡಲಿದ್ಧಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜನವರಿ 11 (ವಡೋದರಾ), ಜನವರಿ 14 (ರಾಜ್ಕೋಟ್) ಮತ್ತು ಜನವರಿ 18 (ಇಂದೋರ್) ರಂದು ಪಂದ್ಯಗಳು ನಡೆಯಲಿವೆ.

ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ–ಫಿಟ್ನೆಸ್ ಟೆಸ್ಟ್ ಬಾಕಿ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.