ಗುರುವಾರ , ಮೇ 6, 2021
23 °C

ನಾನು ಸುರಕ್ಷಿತವಾಗಿದ್ದೇನೆ: ಅಜರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ‘ನಾನು ಪಯಣಿಸುತ್ತಿದ್ದ ಕಾರು ಬುಧವಾರ ಅಪಘಾತಕ್ಕೀಡಾಯಿತು. ಅಲ್ಲಾಹುವಿನ ಕೃಪೆಯಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ. ಧನ್ಯವಾದಗಳು’ ಎಂದು  ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ಧೀನ್ ಟ್ವೀಟ್ ಮಾಡಿದ್ದಾರೆ.

ರಾಜಸ್ಥಾನದ ರಣಥಂಬೋರ್ ಸಮೀಪ ಅವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಅದರಲ್ಲಿ ಅಜರ್ ಜೊತೆಗೆ ಇನ್ನೂ ಮೂವರು ವ್ಯಕ್ತಿಗಳಿದ್ದರು.  ಕಾರು ಪಲ್ಟಿಯಾಗುವ ಮುನ್ನ ರಸ್ತೆ ಬದಿಯ ಹೋಟೆಲ್‌ಗೂ ಡಿಕ್ಕಿಯಾಗಿತ್ತೆನ್ನಲಾಗಿದೆ. ಅಜರ್, ಸಹಪ್ರಯಾಣಿಕರು ಮತ್ತು ಅಂಗಡಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಎಲ್ಲರೂ ಮನೆಗೆ ತೆರಳಿದರು. ಅಜರುದ್ದೀನ್ ಅವರು ಇನ್ನೊಂದು ವಾಹನದಲ್ಲಿ ಪ್ರಯಾಣ ಬೆಳೆಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು