ಶಾರ್ಜಾ: ಕ್ರಿಕೆಟ್ ಶಿಶು ನೇಪಾಳ ತಂಡವು ಎರಡು ಬಾರಿಯ ಟಿ20 ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡವನ್ನು 19 ರನ್ಗಳಿಂದ ಮಣಿಸಿತು. ಅದರೊಂದಿಗೆ ಐಸಿಸಿಯ ಪೂರ್ಣಾವಧಿ ಸದಸ್ಯ ರಾಷ್ಟ್ರವೊಂದರ ಮೇಲೆ ಚೊಚ್ಚಲ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಿಸಿತು.

ಶಾರ್ಜಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ನೇಪಾಳ ತಂಡವು ನಾಯಕ ರೋಹಿತ್ ಪೌಡೆಲ್ (38) ಹಾಗೂ ಕುಶಾಲ್ ಮಲ್ಲಾ (30) ಅವರ ಬ್ಯಾಟಿಂಗ್ ನೆರವಿನಿಂದ ನಿಗದಿತ ಓವರ್ಗಳಲ್ಲಿ 8 ವಿಕೆಟ್ಗಳಿಗೆ 148 ರನ್ ಗಳಿಸಿತು. ಜೇಸನ್ ಹೋಲ್ಡರ್ (20ಕ್ಕೆ4) ಹಾಗೂ ನವೀನ್ ಬಿಡೈಸೀ (29ಕ್ಕೆ3) ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರು.

ಸವಾಲಿನ ಮೊತ್ತ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವು ನೇಪಾಳದ ಬೌಲರ್ಗಳ ಸಂಘಟಿತ ದಾಳಿ ಎದುರಿಸುವಲ್ಲಿ ವಿಫಲವಾಯಿತು. ನಿಯಮಿತವಾಗಿ ವಿಕೆಟ್ ಕಳೆದುಕೊಂಡು 20 ಓವರ್ಗಳ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲಷ್ಟೇ ಶಕ್ತವಾಯಿತು. ನವೀನ್ (22) ಹೊರತುಪಡಿಸಿದರೆ ಉಳಿದವರ್ಯಾರೂ 20 ರನ್ ಗಡಿ ಮುಟ್ಟಲಿಲ್ಲ.

ಸಂಕ್ಷಿಪ್ತ ಸ್ಕೋರು: ನೇಪಾಳ: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 148 (ರೋಹಿತ್ ಪೌಡೆಲ್ 38, ಕುಶಾಲ್ ಮಲ್ಲಾ 30, ಗುಲ್ಶಾನ್ ಝಾ 22; ಜೇಸನ್ ಹೋಲ್ಡರ್ 20ಕ್ಕೆ4, ನವೀನ್ ಬಿಡೈಸೀ 29ಕ್ಕೆ3). ವೆಸ್ಟ್ ಇಂಡೀಸ್: 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 129 (ನವೀನ್ ಬಿಡೈಸೀ 22, ಫ್ಯಾಬಿಯೆನ್ ಆ್ಯಲನ್ 19, ಕುಶಾಲ್ ಭುರ್ತೆಲ್ 17ಕ್ಕೆ2)

ಫಲಿತಾಂಶ: ನೇಪಾಳಕ್ಕೆ 19 ರನ್ ಗೆಲುವು, ಸರಣಿಯಲ್ಲಿ 1–0 ಮುನ್ನಡೆ

ಪಂದ್ಯದ ಆಟಗಾರ: ರೋಹಿತ್ ಪೌಡೆಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.