ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ ದೋಷಿ

Published 30 ಡಿಸೆಂಬರ್ 2023, 3:05 IST
Last Updated 30 ಡಿಸೆಂಬರ್ 2023, 3:05 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ, ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ದೋಷಿ ಎಂದು ಕಠ್ಮಂಡು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

ನೇಪಾಳದ ಸ್ಟಾರ್‌ ಕ್ರಿಕೆಟಿಗ ಎನಿಸಿರುವ ಲಮಿಚಾನೆ ವಿರುದ್ಧ ಸಂತ್ರಸ್ತ ಬಾಲಕಿಯು (17 ವರ್ಷ) ಕಳೆದ ವರ್ಷ ಸೆಪ್ಟೆಂಬರ್‌ 6ರಂದು ಗೋಶಾಲಾ ಮೆಟ್ರೊಪಾಲಿಟಿನ್ ಪೊಲೀಸರಿಗೆ ದೂರು ನೀಡಿದ್ದಳು. ಆಗಸ್ಟ್‌ 21ರಂದು ತನ್ನೊಂದಿಗೆ ಕಠ್ಮಂಡುವಿನ ವಿವಿಧ ತಾಣಗಳಲ್ಲಿ ಸುತ್ತಾಡಿದ್ದ ಸಂದೀಪ್, ನಂತರ ಹೋಟೆಲ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು.

ಅದರಂತೆ ಬಂಧನಕ್ಕೊಳಗಾಗಿದ್ದ ಲಮಿಚಾನೆ, ಈ ವರ್ಷ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಪ್ರಕರಣ ಸಂಬಂಧ ಭಾನುವಾರದಿಂದ ಆರಂಭವಾದ ಅಂತಿಮ ವಿಚಾರಣೆ ನಡೆಸಿದ ನ್ಯಾ.ಶಿಶಿರ್‌ ರಾಜ್ ಧಾಕಲ್‌ ಅವರಿದ್ದ ಏಕಸದಸ್ಯ ಪೀಠ, ಲಮಿಚಾನೆ ದೋಷಿ ಎಂದು ಶುಕ್ರವಾರ ಆದೇಶ ನೀಡಿರುವುದಾಗಿ 'ದಿ ಕಠ್ಮಂಡು ಪೋಸ್ಟ್‌' ಪತ್ರಿಕೆ ವರದಿ ಮಾಡಿದೆ.

ಮುಂದಿನ ವಿಚಾರಣೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ ಎಂದು ಕೋರ್ಟ್‌ ತಿಳಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಪದಾರ್ಪಣೆ ಮಾಡುವ ಮೂಲಕ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡಿದ ನೇಪಾಳದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT