ದುಬೈ: ವೆಸ್ಟ್‌ಇಂಡೀಸ್‌ನ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಕೀರನ್ ಪೊಲಾರ್ಡ್, ವಿಶ್ವ ಕ್ರಿಕೆಟ್‌ನ ಐವರು ಅಗ್ರ ಟ್ವೆಂಟಿ-20 ಕ್ರಿಕೆಟ್ ಆಟಗಾರರನ್ನು ಹೆಸರಿಸಿದ್ದಾರೆ.
ಆದರೆ ಅಚ್ಚರಿಯೆಂಬಂತೆ ಪೊಲಾರ್ಡ್ ಆರಿಸಿದ ಪಟ್ಟಿಯಲ್ಲಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿಲ್ಲ.
ಆದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಾಲ್ಕನೇ ಸ್ಥಾನ ನೀಡಿದ್ದಾರೆ.
ಪೊಲಾರ್ಡ್ ಆಯ್ಕೆ ಮಾಡಿದ 'ಟಾಪ್ 5' ಟಿ20 ಆಟಗಾರರ ಪಟ್ಟಿ ಇಂತಿದೆ:
1. ಕ್ರಿಸ್ ಗೇಲ್
2. ಲಸಿತ್ ಮಾಲಿಂಗ
3. ಸುನಿಲ್ ನಾರಾಯಣ್
4. ಮಹೇಂದ್ರ ಸಿಂಗ್ ಧೋನಿ
5. ಕೀರನ್ ಪೊಲಾರ್ಡ್
ಪಟ್ಟಿಯಲ್ಲಿ ತಮ್ಮನ್ನು ಸೇರಿದಂತೆ ವೆಸ್ಟ್‌ಇಂಡೀಸ್‌ನ ಮೂವರು ಆಟಗಾರರನ್ನು ಆರಿಸಿದ್ದಾರೆ. ಅಲ್ಲದೆ ಟಿ20 ಮಾದರಿಯ ಶ್ರೇಷ್ಠ ಆಟಗಾರನ ಪಟ್ಟವನ್ನು ಕ್ರಿಸ್ ಗೇಲ್ ಅವರಿಗೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.