ಶುಕ್ರವಾರ, ಫೆಬ್ರವರಿ 21, 2020
17 °C

ಕೊಹ್ಲಿ–ರೋಹಿತ್ ಇಬ್ಬರೂ ಅಲ್ಲ: ದಿಶಾ ಪಟಾನಿ ಪ್ರಕಾರ ಬೂಮ್ರಾ ‘ಮ್ಯಾಚ್ ವಿನ್ನರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಪ್ರತಿಭಾವಂತ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಬಾಲಿವುಡ್‌ ನಟಿ ದಿಶಾ ಪಟಾನಿ ಮ್ಯಾಚ್‌ ವಿನ್ನರ್‌ ಎಂದು ಕರೆದಿದ್ದಾರೆ.

ಫೆಬ್ರವರಿ 7ರಂದು ಬಿಡುಗಡೆಗೆ ಸಿದ್ಧವಾಗಿರುವ ‘ಮಲಂಗ್’ ಚಿತ್ರದ ಪ್ರಚಾರ ನಿಮಿತ್ತ ಸ್ಟಾರ್‌ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಿಶಾ, ಈ ರೀತಿ ಹೇಳಿದ್ದಾರೆ. ‘ನಾನು ‘ಮ್ಯಾಚ್‌ ವಿನ್ನರ್‌’ ಅನ್ನು ಆಯ್ಕೆ ಮಾಡುವುದಾದರೆ, ಅದು ಜಸ್‌ಪ್ರೀತ್ ಬೂಮ್ರಾ ಆಗಿರುತ್ತಾರೆ. ಭಾರತ ತಂಡದಲ್ಲಿರುವ ಅತ್ಯುತ್ತಮ ಆಟಗಾರ ಅವರು. ಬೂಮ್ರಾ ಫೆಬ್ರವರಿ 2ರಂದು ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ’ ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿತ್ತು. ಈ ಟೂರ್ನಿಯಲ್ಲಿ ಬೂಮ್ರಾ ಆರು ವಿಕೆಟ್‌ ಪಡೆದಿದ್ದರು. ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲಿ ಸೂಪರ್‌ ಓವರ್‌ ಎಸೆದಿದ್ದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಅಷ್ಟಾಗಿ ಮಿಂಚದ ಬೂಮ್ರಾ, ಕೊನೆಯ ಪಂದ್ಯದಲ್ಲಿ ಕೇವಲ 12 ರನ್‌ ನೀಡಿ 3 ವಿಕೆಟ್‌ ಉರುಳಿಸಿದ್ದರು.

ಕೊಹ್ಲಿ ಎಲ್ಲರ ನಾಯಕ: ಅನಿಲ್‌ ಕಪೂರ್‌
ದಿಶಾ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಟ ಅನಿಲ್ ಕಪೂರ್‌, ‘ಕೊಹ್ಲಿ ಎಲ್ಲರ ನಾಯಕ. ಯಾವುದೇ ಎದುರಾಳಿ ವಿರುದ್ಧ ಅವರು ಹೊಂದಿರುವ ಬದ್ಧತೆಯು ಆಟವನ್ನು ಗೆದ್ದುಕೊಡಬಲ್ಲುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ನಾಳೆಯಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ. ಎರಡನೇ ಪಂದ್ಯ ಫೆಬ್ರುವರಿ 8ರಂದು ಆಕ್ಲೆಂಡ್‌ನಲ್ಲಿ ಮತ್ತು ಮೂರನೇ ಪಂದ್ಯ ಫೆಬ್ರುವರಿ 11ರಂದು ಮೌಂಟ್‌ ಮಾಂಗನೂಯಿಯಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯಗಳು ಫೆ.21 ಹಾಗೂ ಫೆ.29ರಿಂದ ಆರಂಭವಾಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು