ಮೆಲ್ಬರ್ನ್: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೇನ್ ಅವರು ತಮ್ಮ ಕಾರಿನಲ್ಲಿಟ್ಟಿದ್ದ ಹಣದ ಪರ್ಸ್ ಕಳುವಾಗಿದೆ.

ಲಾಕ್ಡೌನ್ನಿಂದಾಗಿ ‘ಗೃಹಬಂಧನ’ದಲ್ಲಿರುವ ಪೇನ್, ತಮ್ಮ ಮನೆಯ ಕಾರು ಗ್ಯಾರೇಜ್ ಅನ್ನು ಜಿಮ್ನಾಷಿಯಂ ಆಗಿ ಪರಿವರ್ತಿಸಿಕೊಂಡಿದ್ದಾರೆ. ಆದ್ದರಿಂದ ಕಾರನ್ನು ಮನೆ ಮುಂದೆ ನಿಲ್ಲಿಸಿದ್ದರು.

‘ನಾನು ನೋಡಿದಾಗ ಕಾರು ಬಾಗಿಲು ತೆರೆದಿತ್ತು. ನನ್ನ ಪರ್ಸ್ ಮತ್ತು ಇನ್ನಿತರ ಕೆಲವು ಸಣ್ಣಪುಟ್ಟ ವಸ್ತುಗಳನ್ನು ಕಳ್ಳಲು ಕದ್ದಿದ್ದಾರೆ. ಬಹುಶಃ ಆ ಹುಡುಗರು (ಕಳ್ಳರು) ಹಸಿದಿರಬೇಕು. ತೆಗೆದುಕೊಂಡು ಹೋಗಿದಾರೆ’ ಎಂದು ಪೇನ್ ಹೇಳಿದ್ದಾರೆ

ವೇತನ ಕಡಿತದ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಆಟದ ಉಳಿವಿಗಾಗಿ ತಮ್ಮ ಕೈಲಾದಷ್ಟು ತ್ಯಾಗ ಮಾಡಲು ಆಟಗಾರರು ಸಿದ್ಧರಾಗಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.