ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನಸೀಮ್ ಶಾ ಅವರ ಪೂರ್ವಜರ ಮನೆಯನ್ನು ಗುರಿಯಾಗಿಸಿಕೊಂಡು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ (Khyber Pakhtunkhwa) ಲೋವರ್ ದಿರ್ ಜಿಲ್ಲೆಯಲ್ಲಿರುವ ನಸೀಮ್ ಶಾ ಅವರ ಪೂರ್ವಜರ ಮನೆ ಮೇಲೆ ದಾಳಿ ನಡೆದಿದ್ದು, ದಾಳಿಯಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಸದ್ಯ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಪಾಕ್ ತಂಡದ ಭಾಗವಾಗಿರುವ ನಸೀಮ್ ಶಾ ತಂಡದ ಜೊತೆಗೆ ಉಳಿಯಲು ನಿರ್ಧರಿಸಿದ್ದಾರೆ.

‘ನಸೀಮ್ ಶಾ ಅವರ ಕುಟುಂಬ ಸದಸ್ಯರು ಬಹುತೇಕ ಇಸ್ಲಾಮಾಬಾದ್ನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಕೆಲವು ನಿಕಟ ಸಂಬಂಧಿಗಳು ಲೋವರ್ ದಿರ್ ಜಿಲ್ಲೆಯಲ್ಲಿದ್ದಾರೆ. ಅವರು ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ನಸೀಮ್ ತಮ್ಮ ಕುಟುಂಬ ಸದಸ್ಯರ ಜೊತೆ ಮಾತನಾಡಿದ ಬಳಿಕ ಮಂಗಳವಾರ ನಡೆಯಲಿರುವ ಪಂದ್ಯಕ್ಕಾಗಿ ತಂಡದ ಜೊತೆಗೆ ಇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ತಂಡದಲ್ಲಿರುವ ಅನೇಕ ಆಟಗಾರರು ಖೈಬರ್ ಪಖ್ತುಂಖ್ವಾ ಭಾಗದವರಾಗಿದ್ದಾರೆ. ಇಲ್ಲಿನ ಉತ್ತರ ಭಾಗದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಸಂಘರ್ಷ ಸಾಮಾನ್ಯವಾಗಿದೆ.
.ಪಾಕಿಸ್ತಾನ ನಿಜಕ್ಕೂ ಹೊಸದಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿತೇ?.ಏಷ್ಯಾ ಕಪ್: ಉಳಿದ ಪಂದ್ಯಗಳಿಗೆ ನಸೀಮ್, ರವೂಫ್ ಅನುಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.