ಬುಧವಾರ, ಜೂನ್ 23, 2021
22 °C

ಕೋವಿಡ್‌: ಪಠಾಣ್ ಅಕಾಡೆಮಿಯಿಂದ ಊಟ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ನಿಂದ ತೊಂದರೆಗೆ ಒಳಗಾದ ದಕ್ಷಿಣ ದೆಹಲಿಯ ಜನತೆಗೆ ಉಚಿತ ಊಟ ಒದಗಿಸಲು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಕ್ರಿಕೆಟ್ ಅಕಾಡೆಮಿ ಮುಂದಾಗಿದೆ.

‘ಕೋವಿಡ್ ಎರಡನೇ ಅಲೆಯು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಬೇಕು. ಹೀಗಾಗಿ ಅಕಾಡೆಮಿ ವತಿಯಿಂದ ಉಚಿತ ಊಟ ನೀಡಲು ಮುಂದಾಗಿದ್ದೇವೆ’ ಎಂದು ಭಾರತ ತಂಡದಲ್ಲಿ ಆಲ್‌ರೌಂಡರ್‌ ಆಗಿದ್ದ ಪಠಾಣ್ ಟ್ವೀಟ್ ಮಾಡಿದ್ದಾರೆ.

ಅತ್ಯುತ್ತಮ ಸ್ವಿಂಗ್ ಬೌಲರ್‌ಗಳಲ್ಲಿ ಒಬ್ಬರಾಗಿರುವ ಇರ್ಫಾನ್ 29 ಟೆಸ್ಟ್ ಮತ್ತು 120 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. 36 ವರ್ಷದ ಈ ಆಟಗಾರ ರಾಯಪುರದಲ್ಲಿ ನಡೆದ ರಸ್ತೆ ಸುರಕ್ಷತಾ ವಿಶ್ವ ಕ್ರಿಕೆಟ್ ಸೀರಿಸ್‌ನಲ್ಲಿ ಪಾಲ್ಗೊಂಡ ನಂತರ ಮಾರ್ಚ್ ತಿಂಗಳಲ್ಲಿ ಸೋಂಕಿಗೆ ಒಳಗಾಗಿದ್ದರು. ಸಹೋದರ ಯೂಸುಫ್ ಪಠಾಣ್‌ಗೂ ಸೋಂಕು ತಗುಲಿತ್ತು. 

ಕಳೆದ ವರ್ಷ ಕೋವಿಡ್‌ ಮೊದಲನೇ ಅಲೆ ಜೋರಾಗಿದ್ದ ಸಂದರ್ಭದಲ್ಲಿ ಈ ಸಹೋದರರು ನಾಲ್ಕು ಸಾವಿರ ಮಾಸ್ಕ್‌ಗಳನ್ನು ಹಂಚಿ ಮಾನವೀಯತೆ ಮೆರೆದಿದ್ದರು. ಅವರ ತಂದೆ ಮೆಹಮೂದ್‌ ಖಾನ್ ಈ ವರ್ಷದ ಆರಂಭದಲ್ಲಿ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಕೋವಿಡ್ ರೋಗಿಗಳಿಗೆ ಆಹಾರ ಒದಗಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು