ಲಾಹೋರ್: ವಿಶ್ವದ ಸಮರ್ಥ ಹಾಗೂ ವಿಶ್ವಾಸಾರ್ಹ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗುವ ಪ್ರಯತ್ನ ಆರಂಭಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದಕ್ಕಾಗಿ ಐದು ವರ್ಷಗಳ ಯೋಜನೆಯನ್ನು ಸೋಮವಾರ ಪ್ರಕಟಿಸಿದೆ.

ಆಡಳಿತ ಮಂಡಳಿಯು ಈ ಯೋಜನೆಗೆ ಒಪ್ಪಿಗೆ ನೀಡಿದ್ದು ಬದ್ಧತೆ, ಪಾರದರ್ಶಕ ಆಡಳಿತ, ನೈತಿಕತೆ ಹಾಗೂ ವೃತ್ತಿಪರ ಶಿಸ್ತು ಎಂಬ ಮೂಲ ಅಂಶಗಳಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಪುರುಷರ, ಮಹಿಳೆಯರ ಮತ್ತು ವಯೋಮಾನ ವಿಭಾಗದವರ ತಂಡಗಳನ್ನು ಬಲಪಡಿಸುತ್ತಲೇ ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವುದು ಪ್ರಮುಖ ಉದ್ದೇಶವಾಗಿದ್ದು ಯೋಜನೆ ಜಾರಿಯಲ್ಲಿರುವ ಐದೂ ವರ್ಷವೂ ಮಂಡಳಿಯ ಪ್ರಗತಿಯನ್ನು ಪ್ರತಿ ತಿಂಗಳು ಅವಲೋಕನ ಮಾಡಲಾಗುವುದು ಎನ್ನಲಾಗಿದೆ.

'ಯೋಜನೆಯನ್ನು ಕಳೆದ ವರ್ಷವೇ ಸಿದ್ಧಗೊಳಿಸಲಾಗಿತ್ತು. ಆದರೆ ಆಡಳಿತ ಮಂಡಳಿಯ ಒಪ್ಪಿಗೆಗಾಗಿ ಕಾಯುತ್ತಿದ್ದೆವು. ಈ ವರ್ಷದ ಫೆಬ್ರುವರಿಯಲ್ಲಿ ಸಹಿ ಹಾಕಲಾಗಿದ್ದು ಇದೀಗ ಔಪಚಾರಿಕವಾಗಿ ಘೋಷಿಸಲು ಅನುಮತಿ ಲಭಿಸಿದೆ’ ಎಂದು ಪಿಸಿಬಿ ಕಾರ್ಯನಿರ್ವಾಹಕ ವಾಸಿಂ ಖಾನ್ ತಿಳಿಸಿದ್ದಾರೆ.

‘ಮಂಡಳಿಯ ಸುಧಾರಣೆಯ ಹಾದಿಯಲ್ಲಿ ಸಾಗಿಸುವ ಮತ್ತು ಹೊಸತನಕ್ಕೆ ಹೊಂದಿಕೊಳ್ಳುವ ಕಾರ್ಯಕ್ರಮವನ್ನು ಕಳೆದ ವರ್ಷವೇ ಜಾರಿಗೆ ತರಲಾಗಿದೆ. ಜಾಗತಿಕ ಮಟ್ಟದಲ್ಲಿ ಮಂಡಳಿಯ ಗೌರವ ಹೆಚ್ಚಿಸುವುದು, ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ನಡೆಯುವಂತೆ ಮಾಡುವುದು, ಮಹಿಳಾ ಕ್ರಿಕೆಟ್‌ಗೆ ಸಂಬಂಧಿಸಿದ ಸೌಲಭ್ಯಗಳನ್ನು ವಿಸ್ತರಿಸುವುದು ಈ ಕಾರ್ಯಕ್ರಮದಲ್ಲಿ ಅಡಕವಾಗಿದೆ’ ಎಂದು ವಾಸಿಂ ಖಾನ್ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.