ಶುಕ್ರವಾರ, ಆಗಸ್ಟ್ 6, 2021
22 °C

ಫೀಲ್ಡಿಂಗ್‌ ವೇಳೆ ಸಹ ಆಟಗಾರನಿಗೆ ರಭಸದಿಂದ ಅಪ್ಪಳಿಸಿದ ಡು ಪ್ಲೆಸಿಗೆ ಗಾಯ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಬುದಾಬಿ: ಯುಎಇನಲ್ಲಿ ಸಾಗುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯದಲ್ಲಿ ಫೀಲ್ಡಿಂಗ್ ವೇಳೆಯಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಫಾಫ್ ಡು ಪ್ಲೆಸಿ ಅವರಿಗೆ ಗಾಯವಾಗಿದೆ.

ಶನಿವಾರ ರಾತ್ರಿ ಅಬುದಾಬಿಯಲ್ಲಿ ಪೇಶಾವರ ಜಲ್ಮಿ ವಿರುದ್ಧ ನಡೆದ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಡು ಪ್ಲೆಸಿ, ಬೌಂಡರಿ ಸೇವ್ ಮಾಡುವ ತವಕದಲ್ಲಿ ಸಹ ಆಟಗಾರ ಮೊಹಮ್ಮದ್ ಹಸ್ನೈನ್ ಅವರಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.

ಮೈದಾನದಲ್ಲೇ ಬಿದ್ದ ಫಾಫ್ ಅವರನ್ನು ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು.

ಇದನ್ನೂ ಓದಿ: 

ಬ್ಯಾಟ್ಸ್‌ಮನ್ ನೇರವಾಗಿ ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿ ಡೈವ್ ಹೊಡೆದು ಹಿಡಿಯುವ ಪ್ರಯತ್ನದಲ್ಲಿ ಮತ್ತೊಂದು ಕಡೆಯಿಂದ ಬಂದ ಸಹ ಆಟಗಾರನಿಗೆ ಡು ಪ್ಲೆಸಿ ಡಿಕ್ಕಿ ಹೊಡೆದಿದ್ದಾರೆ.

 

 

 

ಪಂದ್ಯದ ಎಂಟನೇ ಓವರ್‌ನಲ್ಲಿ ಘಟನೆ ನಡೆದಿತ್ತು. ಮೊಹಮ್ಮದ್ ನವಾಜ್ ದಾಳಿಯಲ್ಲಿ ಡೇವಿಡ್ ಮಿಲ್ಲರ್ ಹೊಡೆದ ಚೆಂಡನ್ನು ಹಿಡಿಯುವ ಪ್ರಯತ್ನದಲ್ಲಿ ಆಟಗಾರರು ಪರಸ್ಪರ ಮುಖಾಮುಖಿಯಾಗಿದ್ದಾರೆ. ಕೊನೆಗೂ ಇಬ್ಬರು ಚೆಂಡನ್ನು ಹಿಡಿಯುವಲ್ಲಿ ವಿಫಲವಾದ ಪರಿಣಾಮ ಬೌಂಡರಿ ಗೆರೆ ದಾಟಿತು.

 

ಬಳಿಕ ಕಂಕಷನ್ ಬದಲಿ ಆಟಗಾರ ನಿಯಮದನ್ವಯ ಪ್ಲೆಸಿಸ್ ಬದಲಿಗೆ ಸೈಯಮ್ ಅಯೂಬ್ ಅವರನ್ನು ಕಣಕ್ಕಿಳಿಸಲಾಯಿತು.

ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಅರ್ಧದಲ್ಲೇ ಮೊಟಕುಗೊಂಡಿರುವ ಪಿಎಸ್‌ಎಲ್ ಟೂರ್ನಿಯನ್ನು ಯುಎಇನಲ್ಲಿ ಮುಂದುವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು