ಶನಿವಾರ, ಜನವರಿ 29, 2022
23 °C

49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೀಮ್ ಇಂಡಿಯಾ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟೀಮ್ ಇಂಡಿಯಾ ಕೋಚ್‌, ಕನ್ನಡಿಗ 'ದಿ ವಾಲ್' ಖ್ಯಾತಿಯ ರಾಹುಲ್‌ ದ್ರಾವಿಡ್‌ ಅವರು ಇಂದು (ಮಂಗಳವಾರ) 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಹುಟ್ಟುಹಬ್ಬದ ಅಂಗವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೇರಿದಂತೆ ಅನೇಕ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಹಾರೈಸಿದ್ದಾರೆ.

1996 ಏಪ್ರಿಲ್ 3ರಂದು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದ್ರಾವಿಡ್ ಪದಾರ್ಪಣೆ ಮಾಡಿದ್ದರು.

164 ಟೆಸ್ಟ್ ಪಂದ್ಯಗಳಲ್ಲಿ 13,288 ರನ್ ಗಳಿಸಿರುವ ದ್ರಾವಿಡ್ 36 ಶತಕ ಹಾಗೂ 63 ಅರ್ಧಶತಕ ಗಳಿಸಿದ್ದಾರೆ. 2012ರಲ್ಲಿ ದ್ರಾವಿಡ್ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ವಿಕೆಟ್ ಕೀಪರ್ ಆಗಿಯು ಮಿಂಚಿದ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ 210 ಕ್ಯಾಚ್ ಪಡೆದಿದ್ದಾರೆ.

ಏಕದಿನ ಕ್ರಿಕೆಟ್​​ನಲ್ಲಿ 344 ಪಂದ್ಯಗಳನ್ನು ಆಡಿದ್ದು, 10,889 ರನ್ ದ್ರಾವಿಡ್ ಕಲೆಹಾಕಿದ್ದಾರೆ. ಇದರಲ್ಲಿ 12 ಶತಕ ಹಾಗೂ 83 ಅರ್ಧಶತಕ ಸೇರಿವೆ. ಐಪಿಎಲ್‌ನಲ್ಲಿ 89 ಪಂದ್ಯಗಳನ್ನಾಡಿ 2,174 ರನ್ ಗಳಿಸಿದ್ದಾರೆ.

ರಾಹುಲ್‌ ಮಾರ್ಗದರ್ಶನದ ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಆಡಲಿದೆ.

ಇದನ್ನೂ ಓದಿ... ವೈರಲ್ ವಿಡಿಯೊ: ಗುಂಡಿ ಬಿದ್ದ ರಸ್ತೆ– ವರದಿಗಾರ್ತಿಯಾದ ಕಾಶ್ಮೀರದ ಪುಟ್ಟ ಬಾಲಕಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು