ಶನಿವಾರ, ಜನವರಿ 18, 2020
25 °C

ಐಸಿಸಿ ರ‍್ಯಾಂಕಿಂಗ್: ಕನ್ನಡಿಗ ಕೆ.ಎಲ್. ರಾಹುಲ್ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಕನ್ನಡಿಗ ಕೆ.ಎಲ್. ರಾಹುಲ್ ಐಸಿಸಿ ಟ್ವೆಂಟಿ–20 ರ‍್ಯಾಂಕಿಂಗ್‌ ನಲ್ಲಿ ಆರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಪಟ್ಟಿಯಲ್ಲಿರುವ ಭಾರತ ಇತರ ಎಲ್ಲ ಆಟಗಾರರಿಗಿಂತ ರಾಹುಲ್ ಸಾಧನೆ ಉತ್ತಮವಾಗಿದೆ.

ಶನಿವಾರ ಬಿಡುಗಡೆ ಆದ ಪಟ್ಟಿಯ ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ರಾಹುಲ್ ಈ ಸಾಧನೆ ಮಾಡಿದ್ದಾರೆ. ಇದೇ ಪಟ್ಟಿಯಲ್ಲಿರುವ ನಾಯಕ ವಿರಾಟ್ ಕೊಹ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಶುಕ್ರವಾರ ಭಾರತ ತಂಡವು ಶ್ರೀಲಂಕಾ ಎದುರು 2–0ಯಿಂದ ಸರಣಿ ಜಯಿಸಿತ್ತು. ಮೂರನೇ ಪಂದ್ಯದಲ್ಲಿ ರಾಹುಲ್ ಅರ್ಧಶತಕ ಬಾರಿಸಿದ್ದರು. ಅವರು ಒಟ್ಟು  760 ಪಾಯಿಂಟ್ಸ್‌ ಗಳಿಸಿದ್ದಾರೆ. ಅವರಿಗಿಂತ ಆರು ಪಾಯಿಂಟ್ ಹೆಚ್ಚು ಗಳಿಸಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿದ್ದಾರೆ.

ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ಗಳಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕರ್ನಾಟಕದ ಮನೀಷ್ ಪಾಂಡೆ ಅವರು ನಾಲ್ಕು ಸ್ಥಾನ ಬಡ್ತಿ ಪಡೆದು 70ನೇ ಸ್ಥಾನಕ್ಕೇರಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 15ನೇ ಸ್ಥಾನಕ್ಕೇರಿದ್ದಾರೆ.

ಯುವ ಬೌಲರ್ ನವದೀಪ್ ಸೈನಿ ಬೌಲಿಂಗ್‌  ವಿಭಾಗದಲ್ಲಿ 146 ರಿಂದ 98ಕ್ಕೆ ಜಿಗಿದಿದ್ದಾರೆ. ಶಾರ್ದೂಲ್ ಠಾಕೂರ್ 92ನೇ ಸ್ಥಾನದಲ್ಲಿರುವರು. ತಂಡ ವಿಭಾಗದಲ್ಲಿ 260 ಪಾಯಿಂಟ್ಸ್‌ ಗಳಿಸಿರುವ ಭಾರತವು ಐದನೇ ಸ್ಥಾನದಲ್ಲಿ ಮುಂದುವರಿದಿದೆ. ಶ್ರೀಲಂಕಾ ಮತ್ತು ಅಫ್ಗಾನಿಸ್ತಾನ ತಂಡವು ತಲಾ 236 ಪಾಯಿಂಟ್ಸ್‌ ಹೊಂದಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು