ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌

Published 29 ಮಾರ್ಚ್ 2024, 10:01 IST
Last Updated 29 ಮಾರ್ಚ್ 2024, 10:01 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟರ್‌ ಮತ್ತು ಆರ್‌ಸಿಬಿಯ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರು ತಮ್ಮ ಪತ್ನಿ ಬೆಲ್ಲಾರೊಂದಿಗೆ ಬೆಂಗಳೂರಿನ ಇಸ್ಕಾನ್‌ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ ನಡೆಯುತ್ತಿರುವ ಕಾರಣ ಇಲ್ಲಿಯೇ ತಂಗಿರುವ ಗ್ರೀನ್‌, ಇಸ್ಕಾನ್‌ನ ರಾಧಾ ಕೃಷ್ಣ ದೇವಾಲಯಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. 

ಗ್ರೀನ್ ದಂಪತಿಯೊಂದಿಗೆ ಆರ್‌ಸಿಬಿ ತಂಡದ ಮತ್ತೊಬ್ಬ ಆಲ್‌ರೌಂಡರ್‌ ವಿಲ್‌ ಜಾಕ್ಸ್‌ ಕೂಡ ಇಸ್ಕಾನ್‌ ದೇವಾಲಯಕ್ಕೆ ತೆರಳಿದ್ದಾರೆ. ಈ ಕುರಿತು ಗ್ರೀನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಗ್ರೀನ್‌ ಅವರ ಫೋಟೊಗಳಿಗೆ, ‘ಈ ಸಲ ಕಪ್‌ ಗೆಲ್ಲುವಂತಾಗಲಿ ಎಂದು ಅಭಿಮಾನಿಗಳು ಶುಭಹಾರೈಸಿದ್ದಾರೆ, ಇನ್ನೂ ಕೆಲವರು ಶತಕ ಬಾರಿಸಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT