ಬ್ರಿಸ್ಬೇನ್: ಭಾರತದ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ, ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ.

ಭಾರತದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರನ್ನು ಹಿಂದಿಕ್ಕಿರುವ ಬೂಮ್ರಾ ಈ ಗೌರವಕ್ಕೆ ಅರ್ಹರಾಗಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದ ಕೊನೆಯ ದಿನದಾಟದಲ್ಲಿ ಬೂಮ್ರಾ ನೂತನ ದಾಖಲೆ ಬರೆದಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಬೂಮ್ರಾ ಈವರೆಗೆ ಒಟ್ಟು 53 ವಿಕೆಟ್ಗಳನ್ನು ಗಳಿಸಿದ್ದಾರೆ. ಆ ಮೂಲಕ ಕಪಿಲ್ ದೇವ್ ದಾಖಲೆಯನ್ನು (51 ವಿಕೆಟ್) ಅಳಿಸಿ ಹಾಕಿದ್ದಾರೆ.

ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆರು ವಿಕೆಟ್ ಗಳಿಸಿದ್ದ ಬೂಮ್ರಾ ದ್ವಿತೀಯ ಇನಿಂಗ್ಸ್ನಲ್ಲೂ ಮಾರಕವಾಗಿ ಕಾಡಿದರು. ಕೇವಲ 18 ರನ್ ತೆತ್ತು ಮೂರು ವಿಕೆಟ್ ಗಳಿಸಿದರು. ಆ ಮೂಲಕ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್ಗಳನ್ನು ಕಬಳಿಸಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಗಳು:

ಜಸ್ಪ್ರೀತ್ ಬೂಮ್ರಾ: 53

ಕಪಿಲ್ ದೇವ್: 51

ಅನಿಲ್ ಕುಂಬ್ಳೆ: 49

ರವಿಚಂದ್ರನ್ ಅಶ್ವಿನ್: 40

ಬಿಷನ್ ಸಿಂಗ್ ಬೇಡಿ: 35
.AUS vs IND Test | ಮಳೆಯಿಂದಾಗಿ ಪಂದ್ಯ ಡ್ರಾ; ಸೋಲು ತಪ್ಪಿಸಿಕೊಂಡ ಭಾರತ.ಬೂಮ್ರಾ ‘ಪ್ರೈಮೇಟ್’ ಪ್ರಭೇದ ಎಂದ ಮಾಜಿ ಆಟಗಾರ್ತಿ: ವಿವಾದದ ಬಳಿಕ ಕ್ಷಮೆಯಾಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.