ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 3rd TEST: ರೋಹಿತ್‌, ಜಡೇಜ ಶತಕ; ಸರ್ಫರಾಜ್‌ ಅರ್ಧ ಶತಕ

Published 15 ಫೆಬ್ರುವರಿ 2024, 11:49 IST
Last Updated 15 ಫೆಬ್ರುವರಿ 2024, 11:49 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ 3ನೇ ಪಂದ್ಯದಲ್ಲಿ ಭಾರತ ದಿನದ ಆಟದ ಅಂತ್ಯಕ್ಕೆ 326 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದೆ.

ಯುವ ವಿಕೆಟ್‌ಕೀಪರ್ ಧ್ರುವ ಜುರೇಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸರ್ಫರಾಜ್‌ ಖಾನ್‌ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ. ಇಂಗ್ಲೆಂಡ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಶೋಯಬ್‌ ಬಷೀರ್‌ ಬದಲು ಅನುಭವಿ ವೇಗಿ ಮಾರ್ಕ್ ವುಡ್‌ ತಂಡ ಕೂಡಿಕೊಂಡಿದ್ದಾರೆ.

ನಾಯಕ ರೋಹಿತ್‌ ಶರ್ಮಾ, ಆಲ್‌ರೌಂಡರ್‌ ರವೀಂದ್ರ ಜಡೇಜ ಶತಕ ಸಿಡಿಸಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಸರ್ಫರಾಜ್‌ ಖಾನ್‌ ಅರ್ಧ ಶತಕ ಸಿಡಿಸುವ ಮೂಲಕ ಗಮನ ಸೆಳೆದರು.

ರೋಹಿತ್‌ ಶರ್ಮಾ ಅವರ 11ನೇ ಶತಕವಾಗಿದೆ. ಅವರು 131 ರನ್‌ಗಳಿಸಿ ಮಾರ್ಕ್‌ ವುಡ್‌ಗೆ ಔಟಾದರು. ಸರ್ಫರಾಜ್‌ ಖಾನ್‌ 62 ರನ್‌ಗಳಲ್ಲಿ ಆಡುತ್ತಿದ್ದಾಗ ರನ್‌ ಔಟ್‌ಗೆ ಬಲಿಯಾದರು. 110 ರನ್‌ ಗಳಿಸಿ ರವೀಂದ್ರ ಜಡೇಜ ಆಡುತ್ತಿದ್ದಾರೆ. 

ಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಕಳೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡದ ಗೆಲುವಿಗೆ ಸಹಕರಿಸಿದ್ದ ಯಶಸ್ವಿ ಜೈಸ್ವಾಲ್‌ (10), ಶುಭಮನ್‌ ಗಿಲ್‌ (0) ಬೇಗನೆ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಇಂಗ್ಲೆಂಡ್‌ ಪರ ವೇಗಿ ಮಾರ್ಕ್‌ ವುಡ್‌ 3 ವಿಕೆಟ್‌ ಪಡೆದುಕೊಂಡಿದ್ದಾರೆ. ಸ್ಪಿನ್ನರ್‌ ಹ್ಯಾಟ್ಲಿಗೆ ಒಂದು ವಿಕೆಟ್‌ ಸಿಕ್ಕಿದೆ. 

ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಸಾಧಿಸಿರುವ ಉಭಯ ತಂಡಗಳು ಈ ಪಂದ್ಯ ಗೆದ್ದು ಮುನ್ನಡೆ ಸಾಧಿಸುವ ಲೆಕ್ಕಾಚಾರದಲ್ಲಿವೆ.‌ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 28 ರನ್‌ ಅಂತರದಿಂದ ಗೆದ್ದಿದ್ದ ಇಂಗ್ಲೆಂಡ್‌, ಎರಡನೇ ಪಂದ್ಯವನ್ನು 106 ರನ್‌ ಅಂತರದಿಂದ ಸೋತಿತ್ತು.

ಸ್ಕೋರ್‌...

ಭಾರತ: 326/5 ( ಮೊದಲ ದಿನದಾಟದ ಅಂತ್ಯಕ್ಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT