ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಬಾಯಿಯ ನೈರ್ಮಲ್ಯ ಅಭಿಯಾನಕ್ಕೆ ‘ನಗುವಿನ ರಾಯಭಾರಿ’ ಆಗಿ ಸಚಿನ್‌ ನೇಮಕ

Published 30 ಮೇ 2023, 9:54 IST
Last Updated 30 ಮೇ 2023, 9:54 IST
ಅಕ್ಷರ ಗಾತ್ರ

ಮುಂಬೈ: ಬಾಯಿಯ ಆರೋಗ್ಯವನ್ನು ಉತ್ತೇಜಿಸುವ ಮಹಾರಾಷ್ಟ್ರದ ಸ್ವಚ್ಚ ಮುಖ್‌ ಅಭಿಯಾನಕ್ಕೆ ಕ್ರಿಕೆಟ್‌ ಐಕಾನ್‌ ಸಚಿನ್‌ ತೆಂಡೂಲ್ಕರ್‌ ಅವರು ‘ನಗುವಿನ ರಾಯಭಾರಿ’ (ಸ್ಮೈಲ್‌ ಅಂಬಾಸಿಡರ್‌) ಆಗಿ ನೇಮಕಗೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಂಗಳವಾರ ತೆಂಡೂಲ್ಕರ್ ಅವರೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದರು. 

ಮುಂದಿನ ಐದು ವರ್ಷಗಳ ಕಾಲ ಬ್ಯಾಟಿಂಗ್‌ ದಿಗ್ಗಜ ತೆಂಡೂಲ್ಕರ್ ಪ್ರಚಾರದ ಬ್ರಾಂಡ್‌ ಅಂಬಾಸಿಡರ್‌ ಆಗಿರುತ್ತಾರೆ. ಸ್ವಚ್ಛ ಮುಖ್ ಅಭಿಯಾನವು ಬಾಯಿಯ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸಲು ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಭಾರತೀಯ ದಂತ ಸಂಘವು ಕೈಗೊಂಡಿರುವ ರಾಷ್ಟ್ರೀಯ ಅಭಿಯಾನವಾಗಿದೆ. 

ಹಲ್ಲು ಉಜ್ಜುವುದು, ಬಾಯಿ ತೊಳೆಯುವುದು, ಆರೋಗ್ಯಕರ ಆಹಾರವನ್ನು ಸೇವಿಸುವುದು, ಸಿಗರೇಟ್ ಸೇದುವುದನ್ನು ತಪ್ಪಿಸುವುದು ಮತ್ತು ವರ್ಷಕ್ಕೆ ಎರಡು ಬಾರಿಯಾದರೂ ದಂತ ವೈದ್ಯರನ್ನು ಭೇಟಿ ಮಾಡುವುದು ಅಭಿಯಾನವು ಉತ್ತೇಜಿಸುವ ಐದು ಪ್ರಮುಖ ಸಂದೇಶಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT