ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ನಿವೃತ್ತಿ ವದಂತಿ: ಲಾಕ್‌ಡೌನ್ ಜನರ ತಲೆ ಕೆಡಿಸಿದೆ ಎಂದ ಸಾಕ್ಷಿ 

Last Updated 28 ಮೇ 2020, 8:08 IST
ಅಕ್ಷರ ಗಾತ್ರ
ಧೋನಿ ನಿವೃತ್ತಿ ವದಂತಿ: ಲಾಕ್‌ಡೌನ್ ಜನರ ತಲೆ ಕೆಡಿಸಿದೆ ಎಂದ ಸಾಕ್ಷಿ 
ADVERTISEMENT
""

ಬೆಂಗಳೂರು: ಕಳೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೂ ಮುಂಚಿನಿಂದಲೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ, ಸದ್ದು ಸಾಮಾನ್ಯವಾಗಿದೆ. ಬುಧವಾರ ಸಹ ಧೋನಿ ರಿಟೈರ್ಸ್ (#DhoniRetires) ಹ್ಯಾಷ್ ಟ್ಯಾಗ್ ಬಳಸಿ ಗಾಳಿ ಸುದ್ದಿ ಹರಿಯಬಿಡಲಾಗಿತ್ತು. ಧೋನಿ ಪತ್ನಿ ಸಾಕ್ಷಿ, ಗಾಳಿ ಸುದ್ದಿ ಹಬ್ಬಿಸುತ್ತಿರುವವರಿಗೆ 'ಇದೊಂದು ಅವಿವೇಕಿತನ' ಎಂಬಂತೆ ಪ್ರತಿಕ್ರಿಯಿಸಿದ್ದಾರೆ.

ಇಂಥ ಯಾವುದೇ ವದಂತಿಗಳಿಗೆ ಧೋನಿ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. 'ಇದು ಕೇವಲ ಊಹಾಪೋಹಗಳಷ್ಟೇ. ತಿಳಿದಿದೆ ಲಾಕ್‌ಡೌನ್‌ ಜನರ ತಲೆ ಕೆಡುವಂತೆ ಮಾಡಿದೆ... ' ಎಂದು ಸಾಕ್ಷಿ ಸಿಂಗ್‌ ಟ್ವೀಟ್‌ ಮಾಡಿದ್ದರು. ಟ್ವೀಟಿಸಿ ಕೆಲವೇ ಸಮಯದಲ್ಲಿ ಅದನ್ನು ಅವರು ಡಿಲೀಟ್‌ ಮಾಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಹ ಧೋನಿ ನಿವೃತ್ತಿಯ ಬಗ್ಗೆ ಹರಡಿದ ವದಂತಿಗಳನ್ನು ತಣ್ಣಗಾಗಿಸಲು ಸಾಕ್ಷಿ ಸಾಮಾಜಿಕ ಮಾಧ್ಯಮಗಳಲ್ಲಿ ವಾಸ್ತವವನ್ನು ತೆರೆದಿಟ್ಟಿದ್ದರು. ಧೋನಿ ಭವಿಷ್ಯದ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

2019ರ ವಿಶ್ವಕಪ್‌ ಸೆಮಿ–ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಧೋನಿ ಕೊನೆಯ ಪಂದ್ಯ ಆಡಿದರು. ಆ ‍‍ಪಂದ್ಯದಲ್ಲಿ ಗೆಲುವಿನ ಭರವಸೆಯಾಗಿದ್ದ ಧೋನಿ ರನ್‌ಔಟ್‌ ಆಗುತ್ತಿದ್ದಂತೆ ಫೈನಲ್‌ ಕನಸು ದೂರವಾಯಿತು. ಅಲ್ಲಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ನಿವೃತ್ತಿ ಕುರಿತ ವದಂತಿಗಳು ಟ್ವಿಟರ್‌ನಲ್ಲಿ ಆಗಾಗ್ಗೆ ಟ್ರೆಂಡ್ ಆಗುತ್ತಿದೆ.

ಕೋವಿಡ್-19 ಲಾಕ್ ಡೌನ್ ನಿಂದಾಗಿ ಐಪಿಎಲ್ 13 ರದ್ದುಗೊಂಡಿದೆ. ಟಿ20 ವರ್ಲ್ಡ್ ಕಪ್ ಸಹ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಬಹುಶಃ ಧೋನಿ ಭಾರತ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ ಆಡುವುದು ಅಸ್ಪಷ್ಟವಾಗಿದೆ.

ಧೋನಿ ನಿವೃತ್ತಿ ವದಂತಿ: ಲಾಕ್‌ಡೌನ್ ಜನರ ತಲೆ ಕೆಡಿಸಿದೆ ಎಂದ ಸಾಕ್ಷಿ 
ಸಾಕ್ಷಿ ಸಿಂಗ್‌ಡಿಲೀಟ್ ಮಾಡಿರುವ ಟ್ವೀಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT