ನವದೆಹಲಿ: ಕರ್ನಾಟಕದ ಆಫ್ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಅವರು ಭಾರತ ಮಹಿಳಾ ಎ ತಂಡಕ್ಕೆ ಮರಳಿದ್ದಾರೆ.

ಗಾಯದಿಂದಾಗಿ ದೀರ್ಘ ಸಮಯದಿಂದ ಆರೈಕೆಯಲ್ಲಿದ್ದ ಅವರು ಈಗ ಚೇತರಿಸಿಕೊಂಡಿದ್ಧಾರೆ. ಆಗಸ್ಟ್ 7 ರಿಂದ 24ರವರೆಗೆ ಆಸ್ಟ್ರೇಲಿಯಾ ಎದುರು ನಡೆಯಲಿರುವ ಟಿ20 ಸರಣಿಯಲ್ಲಿ ಅವರು ಆಡಲಿದ್ದಾರೆ.

ಹೋದ ವರ್ಷ ಯುಎಇಯಲ್ಲಿ ನಡೆದಿದ್ದ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಗಾಯಗೊಂಡಿದ್ದರು. ಮಧ್ಯಮವೇಗಿ ತಿತಾಸ್ ಸಾಧು ಕೂಡ ತಂಡಕ್ಕೆ ಮರಳಿಬಂದಿದ್ದಾರೆ. ಅವರು ಈಚೆಗೆ ಶ್ರೀಲಮಕಾ ಎದುರಿನ ತ್ರಿಕೋನ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಸರಣಿಯಲ್ಲಿಯೂ ಅವರು ಆಡುತ್ತಿಲ್ಲ. ಎ ತಂಡವನ್ನು ರಾಧಾ ಯಾದವ್ ಮುನ್ನಡೆಸುವರು.

ತಂಡಗಳು

ಟಿ20: ರಾಧಾ ಯಾದವ್ (ನಾಯಕಿ), ಮಿನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ವೃಂದಾ ದಿನೇಶ್, ಸಜನಾ ಸಜೀವನ್, ಉಮಾ ಚೆಟ್ರಿ (ವಿಕೆಟ್ಕೀಪರ್), ರಾಘವಿ ಬಿಷ್ಠ್, ಶ್ರೇಯಾಂಕಾ ಪಾಟೀಲ, ಪ್ರೇಮ್ ರಾವತ್, ನಂದಿನಿ ಕಶ್ಯಪ್ (ವಿಕೆಟ್ಕೀಪರ್), ತನುಜಾ ಕನ್ವರ್, ವಿ.ಜೆ. ಜೋಶಿತಾ, ಶಬ್ನಮ್ ಶಕೀಲ್, ಸೈಮಾ ಠಾಕೂರ್, ತಿತಾಸ್ ಸಾಧು.

ಏಕದಿನ–ನಾಲ್ಕುದಿನ ಮಾದರಿ: ರಾಧಾಯಾದವ್ (ನಾಯಕಿ), ಮಿನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ತೇಜಲ್ ಹಸ್ಬನೀಸ್, ರಾಘವಿ ಬಿಷ್ಠ್, ತನುಶ್ರೀ ಸರ್ಕಾರ್, ಉಮಾ ಚೆಟ್ರಿ (ವಿಕೆಟ್ಕೀಪರ್), ಪ್ರಿಯಾ ಮಿಶ್ರಾ, ತನುಜಾ ಕನ್ವರ್, ನಂದಿನಿ ಕಶ್ಯಪ್ (ವಿಕೆಟ್ಕೀಪರ್), ಧಾರಾ ಗುಜ್ಜರ್, ವಿ.ಜೆ. ಜೋಶಿತಾ, ಶಬ್ನಂ ಶಕೀಲ್, ಸೈಮಾ ಠಾಕೂರ್, ತಿತಾಸ್ ಸಾಧು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.