ಭಾನುವಾರ, ಜೂಲೈ 5, 2020
27 °C

ದೀಪ ಬೆಳಗಿಸಿದ ಕ್ರೀಡಾ ತಾರೆಯರು

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಭಾರತೀಯರೆಲ್ಲರೂ ಭಾನುವಾರ ರಾತ್ರಿ ಸರಿಯಾಗಿ ಒಂಬತ್ತು ಗಂಟೆಗೆ ಮನೆಯ ವಿದ್ಯುದೀಪಗಳನ್ನು ಆರಿಸಿ ಸತತ ಒಂಬತ್ತು ನಿಮಿಷಗಳ ಕಾಲ ದೀಪ ಬೆಳಗುವ ಮೂಲಕ ಕೊರೊನಾ ವೈರಾಣುವಿನ ವಿರುದ್ಧ ಸಂಘಟಿತ ಹೋರಾಟ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಕ್ರೀಡಾ ತಾರೆಗಳು ಬೆಂಬಲ ಸೂಚಿಸಿದರು.

ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಒಲಿಂಪಿಯನ್‌ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌, ಸ್ಪ್ರಿಂಟರ್‌ ಹಿಮಾ ದಾಸ್‌, ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್‌, ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌, ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್‌, ರವಿಚಂದ್ರನ್‌ ಅಶ್ವಿನ್‌, ಸುರೇಶ್‌ ರೈನಾ ಸೇರಿದಂತೆ ಅನೇಕರು ಹಣತೆ, ಮೋಂಬತ್ತಿ ಹಾಗೂ ಮೊಬೈಲ್‌ ಫ್ಲ್ಯಾಷ್‌ಲೈಟ್‌ಗಳನ್ನು ಬೆಳಗಿದರು. ಈ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು