ಅಬುಧಾಬಿ: ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಆಡುತ್ತಿರುವ ಅಸ್ಗರ್ ಅಫ್ಗನ್‌ಗೆ ಅಫ್ಗಾನಿಸ್ತಾನ ಹಾಗೂ ನಮೀಬಿಯಾ ಆಟಗಾರರು 'ಗಾರ್ಡ್ ಆಫ್ ಆನರ್' ಸಲ್ಲಿಸಿದ್ದಾರೆ.

ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಎಲ್ಲ ಮಾದರಿಯಅಂತರರಾಷ್ಟ್ರೀಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವುದಾಗಿ 33ರ ಹರೆಯದ ಅಸ್ಗರ್ ಪ್ರಕಟಿಸಿದ್ದರು.

ಇದನ್ನೂ ಓದಿ:ಭಾರತ–ನ್ಯೂಜಿಲೆಂಡ್ ಮಾಡು ಇಲ್ಲವೇ ಮಡಿ ಹೋರಾಟ: ವಿರಾಟ್–ಕೇನ್ ನಾಯಕತ್ವಕ್ಕೆ ಸವಾಲು

ಭಾನುವಾರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ವೇಳೆ ನಮೀಬಿಯಾ ಆಟಗಾರರು ಎರಡು ಬದಿ ನಿಂತು ಚಪ್ಪಾಳೆ ತಟ್ಟುತ್ತಾ ಗೌರವವನ್ನು ಸಲ್ಲಿಸಿದರು.

23 ಎಸೆತಗಳನ್ನು ಎದುರಿಸಿದ ಅಸ್ಗರ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು.

ಔಟ್ ಆದ ಬಳಿಕ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದ ವೇಳೆಯಲ್ಲಿ ಅಫ್ಗಾನಿಸ್ತಾನ ಆಟಗಾರರು ಬ್ಯಾಟ್ ಹಿಡಿದು ನಿಂತು ಗೌರವವನ್ನು ಸಲ್ಲಿಸಿದರು.

ಅಫ್ಗಾನಿಸ್ತಾನ ತಂಡದ ಮಾಜಿ ನಾಯಕರೂ ಆಗಿರುವ ಅಸ್ಗರ್, ತಮ್ಮ 12 ವರ್ಷಗಳ ವೃತ್ತಿ ಜೀವನದಲ್ಲಿ, ಆರು ಟೆಸ್ಟ್, 114 ಏಕದಿನ ಹಾಗೂ 75 ಟ್ವೆಂಟಿ-20 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.