ದುಬೈ: ಮುಂಬರುವ ಟ್ವೆಂಟಿ-20 ವಿಶ್ವಕಪ್ಗೂ ಮುನ್ನ ಮಾನಸಿಕವಾಗಿ ಸಿದ್ಧರಾಗುವ ನಿಟ್ಟಿನಲ್ಲಿ ಐಪಿಎಲ್ ಬಯೋಬಬಲ್ ತೊರೆದಿರುವ ವೆಸ್ಟ್ಇಂಡೀಸ್ನ ದೈತ್ಯ ಆಟಗಾರ ಕ್ರಿಸ್ ಗೇಲ್, ಸದ್ಯದುಬೈ ಮರಳುಗಾಡಿನಲ್ಲಿ ಆನಂದಿಸುತ್ತಿದ್ದಾರೆ.

ಈ ಕುರಿತು ಸ್ವತಃ ಗೇಲ್ ಅವರೇ ತಮ್ಮ ಸಾಮಾಜಿಕ ಖಾತೆ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗಾಗಿ ಚಿತ್ರಗಳನ್ನು ಹಂಚಿದ್ದಾರೆ.

ದುಬೈಯಲ್ಲಿ ವಿಹಾರ ನೌಕೆಯಲ್ಲಿ ಸೂರ್ಯಾಸ್ತವನ್ನು ಆನಂದಿಸುತ್ತಿರುವ ಚಿತ್ರಗಳನ್ನು ಗೇಲ್ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮೊದಲು ಐಷಾರಾಮಿ ಹೋಟೆಲ್ನಲ್ಲಿ ಈಜುಕೊಳದ ಚಿತ್ರವನ್ನು ಹಂಚಿದ್ದರು.

ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಗೇಲ್ ಪ್ರಭಾವಿ ಎನಿಸಿಕೊಳ್ಳಲಿಲ್ಲ. ಆಡಿರುವ 10 ಪಂದ್ಯಗಳಲ್ಲಿ 21.44ರ ಸರಾಸರಿಯಲ್ಲಿ 193 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.