ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ಸೂರ್ಯಕುಮಾರ್‌ ಅರ್ಧಶತಕ, ಆಫ್ರಿಕಾ ಗೆಲುವಿಗೆ 134 ರನ್ ಗುರಿ

Last Updated 30 ಅಕ್ಟೋಬರ್ 2022, 12:48 IST
ಅಕ್ಷರ ಗಾತ್ರ

ಪರ್ತ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ‘ಸೂಪರ್‌ 12’ ಹಂತದ ಪಂದ್ಯದಲ್ಲಿ ಭಾನುವಾರ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 133 ರನ್‌ ಕಲೆಹಾಕಿದೆ.

ಪರ್ತ್‌ನ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಪ್ರಮುಖ ಆಟಗಾರರ ಬ್ಯಾಟಿಂಗ್ ವೈಫಲ್ಯದಿಂದಾಗಿ ಆಘಾತ ಎದುರಿಸಿತು.

ಕೆ.ಎಲ್‌.ರಾಹುಲ್ 9, ರೋಹಿತ್ ಶರ್ಮಾ 15, ವಿರಾಟ್ ಕೊಹ್ಲಿ 12, ಹಾರ್ದಿಕ್ ಪಾಂಡ್ಯ 2 ರನ್ ಗಳಿಸಿ ಲುಂಗಿ ಗಿಡಿಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ದೀಪಕ್ ಹೂಡಾ ರನ್ ಖಾತೆ ತೆರೆಯುವ ಮುನ್ನವೇ ಎನ್ರಿಚ್ ನಾಕಿಯಾ ಪೆವಿಲಿಯನ್ ಹಾದಿ ತೋರಿಸಿದರು.

ಭರವಸೆ ಎನಿಸಿದ್ದ ದಿನೇಶ್ ಕಾರ್ತಿಕ್ ಕೇವಲ 6 ರನ್ ಗಳಿಸಿದರೆ, ಆರ್‌. ಅಶ್ವಿನ್ 7 ರನ್ ಗಳಿಸಿ ವೇಯ್ನ್ ಪಾರ್ನೆಲ್‌ಗೆ ಔಟ್‌ ಆದರು. ಇತ್ತ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಸೂರ್ಯಕುಮಾರ್ ಯಾದವ್ ಅರ್ಧಶತಕ (68) ಸಿಡಿಸಿದರು.

ಮೊಹಮ್ಮದ್ ಶಮಿ 0, ಭುವನೇಶ್ವರ್ ಕುಮಾರ್‌ ಔಟಾಗದೆ 4, ಆರ್ಷದೀಪ್ ಸಿಂಗ್ ಔಟಾಗದೆ ಉಳಿದರು.

ಆಫ್ರಿಕಾ ಪರ ಲುಂಗಿ ಗಿಡಿ 4, ವೇಯ್ನ್ ಪಾರ್ನೆಲ್ 3, ಎನ್ರಿಚ್ ನಾಕಿಯಾ 1 ವಿಕೆಟ್ ಪಡೆದು ಮಿಂಚಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT