ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup ಸೆಮಿಫೈನಲ್ಸ್: ಯಾರಿಗೆ ಯಾರು ಎದುರಾಳಿ ಯಾರು?

Last Updated 7 ನವೆಂಬರ್ 2022, 12:35 IST
ಅಕ್ಷರ ಗಾತ್ರ

ಮೆಲ್ಬರ್ನ್‌:ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ 'ಎ' ಗುಂಪಿನಿಂದ ನ್ಯೂಜಿಲೆಂಡ್, ಇಂಗ್ಲೆಂಡ್‌ ಹಾಗೂ 'ಬಿ' ಗುಂಪಿನಿಂದ ಭಾರತ, ಪಾಕಿಸ್ತಾನ ಸೆಮಿಫೈನಲ್ಸ್‌ಗೆ ಲಗ್ಗೆ ಇಟ್ಟಿವೆ.

ಸೆಮಿಫೈನಲ್‌ ಪಂದ್ಯಗಳು ನವೆಂಬರ್‌ 9 ಮತ್ತು 10 ರಂದು ನಡೆಯಲಿವೆ.'ಎ' ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಮತ್ತು'ಬಿ' ಗುಂಪಿನ ಎರಡನೇ ಸ್ಥಾನಿ ಪಾಕಿಸ್ತಾನಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಅದೇರೀತಿ,'ಬಿ' ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತಕ್ಕೆ, 'ಎ' ಗುಂಪಿನ ಎರಡನೇ ಸ್ಥಾನಿ ಇಂಗ್ಲೆಂಡ್‌ ಎರಡನೇ ಸೆಮಿಫೈನಲ್‌ನಲ್ಲಿ ಸವಾಲು ಹಾಕಲಿದೆ.

ನಾಕೌಟ್‌ ಹಂತದ ಮೊದಲ ಪಂದ್ಯವು ಸಿಡ್ನಿಯಲ್ಲಿ ಮತ್ತು ಎರಡನೇ ಪಂದ್ಯವು ಅಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯಗಳಲ್ಲಿ ಗೆಲ್ಲುವವರು ನವೆಂಬರ್‌ 13ರಂದು ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.

ಸೂಪರ್‌ 12ರ ಹಂತದಲ್ಲಿ ತಂಡಗಳ ಸಾಧನೆ
'ಎ' ಗುಂಪು: ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ತಂಡಗಳುಸೂಪರ್‌ 12ರ ಹಂತದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಮೂರು ಜಯ, ಒಂದು ಸೋಲು ಕಂಡಿವೆ. ಎರಡೂ ತಂಡಗಳು ಮಳೆಯಿಂದಾಗಿ ಒಂದು ಪಂದ್ಯದಲ್ಲಿ ಆಡಲು ಸಾಧ್ಯವಾಗಿಲ್ಲ. ಹೀಗಾಗಿ ಸಮಾನ (7) ಅಂಕಗಳನ್ನು ಹೊಂದಿವೆ. ಆದರೆ, ನ್ಯೂಜಿಲೆಂಡ್‌ ರನ್‌ರೇಟ್‌ ಆಧಾರದಲ್ಲಿ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ನ್ಯೂಜಿಲೆಂಡ್‌

ಪಂದ್ಯ ಎದುರಾಳಿ ಫಲಿತಾಂಶ
1ನೇ ಪಂದ್ಯ ಆಸ್ಟ್ರೇಲಿಯಾ 89 ರನ್ ಅಂತರದ ಜಯ
2ನೇ ಪಂದ್ಯ ಅಫ್ಗಾನಿಸ್ತಾನ ಮಳೆಯಿಂದಾಗಿ ರದ್ದು
3ನೇ ಪಂದ್ಯ ಶ್ರೀಲಂಕಾ 65 ರನ್‌ ಅಂತರದ ಜಯ
4ನೇ ಪಂದ್ಯ ಇಂಗ್ಲೆಂಡ್ 20 ರನ್ ಅಂತರದ ಸೋಲು
5ನೇ ಪಂದ್ಯ ಐರ್ಲೆಂಡ್‌ 35 ರನ್ ಅಂತರದ ಜಯ

ಇಂಗ್ಲೆಂಡ್‌

ಪಂದ್ಯ ಎದುರಾಳಿ ಫಲಿತಾಂಶ
1ನೇ ಪಂದ್ಯ ಅಫ್ಗಾನಿಸ್ತಾನ 5 ವಿಕೆಟ್‌ ಅಂತರದ ಜಯ
2ನೇ ಪಂದ್ಯ ಐರ್ಲೆಂಡ್‌ 5 ರನ್‌ ಅಂತರದ ಜಯ
3ನೇ ಪಂದ್ಯ ಆಸ್ಟ್ರೇಲಿಯಾ ಮಳೆಯಿಂದಾಗಿ ರದ್ದು
4ನೇ ಪಂದ್ಯ ನ್ಯೂಜಿಲೆಂಡ್‌ 20 ರನ್ ಅಂತರದ ಜಯ
5ನೇ ಪಂದ್ಯ ಶ್ರೀಲಂಕಾ 4 ವಿಕೆಟ್ ಅಂತರದ ಜಯ

'ಬಿ' ಗುಂಪು: ಭಾರತ ತಂಡಸೂಪರ್‌ 12ರ ಹಂತದಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಜಯ ಮತ್ತು ಒಂದು ಸೋಲು ಕಂಡಿದೆ. ಪಾಕಿಸ್ತಾನ ಸಹ ಇಷ್ಟೇ ಪಂದ್ಯಗಳನ್ನು ಆಡಿದ್ದು 3 ಗೆಲುವು ಮತ್ತು 2 ಸೋಲು ಕಂಡಿದೆ. ಭಾರತದ ಬಳಿ 8 ಅಂಕಗಳಿದ್ದು, ಪಾಕಿಸ್ತಾನ 6 ಅಂಕಗಳನ್ನು ಹೊಂದಿದೆ.ಹೀಗಾಗಿ ಪಾಯಿಂಟ್‌ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿ ಉಳಿದುಕೊಂಡಿವೆ.

ಭಾರತ

ಪಂದ್ಯ ಎದುರಾಳಿ ಫಲಿತಾಂಶ
1ನೇ ಪಂದ್ಯ ಪಾಕಿಸ್ತಾನ 4 ವಿಕೆಟ್ ಅಂತರದ ಜಯ
2ನೇ ಪಂದ್ಯ ನೆದರ್‌ಲೆಂಡ್ಸ್‌ 56 ರನ್‌ ಅಂತರದ ಜಯ
3ನೇ ಪಂದ್ಯ ದಕ್ಷಿಣ ಆಫ್ರಿಕಾ 5 ವಿಕೆಟ್‌ ಅಂತರದ ಸೋಲು
4ನೇ ಪಂದ್ಯ ಬಾಂಗ್ಲಾದೇಶ 5 ರನ್‌ ಅಂತರದ ಜಯ
5ನೇ ಪಂದ್ಯ ಜಿಂಬಾಬ್ವೆ 71 ರನ್‌ ಅಂತರದ ಜಯ

ಪಾಕಿಸ್ತಾನ

ಪಂದ್ಯ ಎದುರಾಳಿ ಫಲಿತಾಂಶ
1ನೇ ಪಂದ್ಯ ಭಾರತ 4ವಿಕೆಟ್ ಅಂತರದ ಸೋಲು
2ನೇ ಪಂದ್ಯ ಜಿಂಬಾಬ್ವೆ 1 ರನ್ ಅಂತರದ ಸೋಲು
3ನೇ ಪಂದ್ಯ ನೆದರ್‌ಲೆಂಡ್ಸ್‌ 6 ವಿಕೆಟ್ ಅಂತರದ ಜಯ
4ನೇ ಪಂದ್ಯ ದಕ್ಷಿಣ ಆಫ್ರಿಕಾ 33 ರನ್‌ ಅಂತರದ ಜಯ
5ನೇ ಪಂದ್ಯ ಬಾಂಗ್ಲಾದೇಶ 5 ವಿಕೆಟ್ ಅಂತರದ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT