ಸೋಮವಾರ, ಏಪ್ರಿಲ್ 12, 2021
24 °C

ಕೆ.ಎಲ್‌ ರಾಹುಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಎಲ್‌ ರಾಹುಲ್‌

-18/4/1992ರಲ್ಲಿ ಕರ್ನಾಟಕದಲ್ಲಿ ಜನನ

-ಬಲಗೈ ಬ್ಯಾಟ್ಸ್‌ಮನ್‌ 

-ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ 2016ರ ಜೂನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ 

 

ವೃತ್ತಿ ಜೀವನದ ಸಾಧನೆಗಳು 

1. 2014ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಮೆಲ್ಬೋರ್ನ್‌ನ ಬಾಕ್ಸಿಂಗ್‌ ಡೇ ಪಿಚ್‌ನಲ್ಲಿ ಕೆ.ಎಲ್‌ ರಾಹುಲ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಿಂದ ರಾಹುಲ್‌ ಗಳಿಸಿದ್ದು 4ರನ್‌. ಆದರೆ, ನಂತರದ ಪಂದ್ಯದಲ್ಲಿ ಅಸ್ಟ್ರೇಲಿಯಾದ ವಿರುದ್ಧ ಅವರು 110 ರನ್‌ಗಳನ್ನು ಸಿಡಿಸಿದ್ದರು. 

2. 2016ರಲ್ಲಿ ವೆಸ್ಟ್‌ ಇಂಡಿಸ್‌ ವಿರುದ್ಧ ನಡೆದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದ ರಾಹುಲ್‌ ಜಮೈಕಾದ ಪಿಚ್‌ನಲ್ಲಿ 158ರನ್‌ ಗಳಿಸಿದ್ದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ರಾಹುಲ್‌ ಅವರ ಬೆಸ್ಟ್‌ ಎನಿಸಿಕೊಂಡಿದೆ. 

3.ಕೇವಲ 20 ಇನ್ನಿಂಗ್ಸ್‌ಗಳಲ್ಲೇ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಲ್ಲಿಯೂ ಶತಕ ಸಿಡಿಸಿದ ಏಕೈಕ ಆಟಗಾರ ಎಂಬ ಕೀರ್ತಿ ರಾಹುಲ್‌ ಅವರ ಹೆಸರಲ್ಲಿದೆ. 

4.ಇಂಗ್ಲೆಂಡ್‌ ವಿರುದ್ಧದ ಟಿ20ಯಲ್ಲಿ 46 ಬಾಲ್‌ಗಳಿಗೆ ಶತಕಗಳಿಸಿರುವ ರಾಹುಲ್‌ ಕಡಿಮೆ ಬಾಲ್‌ಗಳ ಮೂಲಕ ಅತಿ ವೇಗವಾಗಿ ಶತಕ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ಅಲ್ಲದೆ, ಟಿ20 ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದು ವೇಗವಾಗಿ ಶತಕ ಸಿಡಿಸಿದ ಭಾರತದ ಮೊದಲ ಆಟಗಾರನೂ ಹೌದು.  

 

ಅಂಕಿ ಅಂಶಗಳಲ್ಲಿ ಮಾಹಿತಿ 

ಬ್ಯಾಟಿಂಗ್‌/ ಫೀಲ್ಡಿಂಗ್‌ ವಿವರ 

ಒಟ್ಟು ಪಂದ್ಯಗಳು– 14

ಇನ್ನಿಂಗ್ಸ್‌–

ನಾಟ್‌ ಔಟ್‌–3

ರನ್‌ಗಳು–343

ಬೆಸ್ಟ್‌–100*

ಸರಾಸರಿ–34.30

ಎದುರಿಸಿದ ಬಾಲ್‌ಗಳು–424

ಸ್ಟ್ರೈಕ್‌ ರೇಟ್‌–80.89

ಶತಕಗಳು–1

ಅರ್ಧಶತಕಗಳು–2

ಬೌಂಡರಿಗಳು–26

ಸಿಕ್ಸರ್‌ಗಳು–5

ಕ್ಯಾಚ್‌ಗಳು–7

ಸ್ಟಂಪ್‌ಗಳು–0

 

ಮಾಹಿತಿ: ಐಸಿಸಿ ವೆಬ್‌ಸೈಟ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು