ಶನಿವಾರ, ಮಾರ್ಚ್ 28, 2020
19 °C
ಜಗತ್ತಿನ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಉದ್ಘಾಟನೆಗೆ ಸಿದ್ಧ

ಕ್ರಿಕೆಟ್‌ ‘ಧರ್ಮ’ಕ್ಕೊಂದು ದೇಗುಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಭಾರತದಲ್ಲಿ ಕ್ರಿಕೆಟ್‌ ಒಂದು ಧರ್ಮ’ ಎಂಬ ಮಾತು ಕ್ಲೀಷೆ ಎನಿಸಬಹುದು. ಆದರೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಆ ಧರ್ಮಕ್ಕಾಗಿ ಒಂದು ಭವ್ಯ ಮಂದಿರ ನಿರ್ಮಾಣವಾಗಿದೆ. ಗುಜರಾತ್‌ ಕ್ರಿಕೆಟ್‌ ಸಂಸ್ಥೆ (ಜಿಸಿಎ) ಮಾಜಿ ಅಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು ಇದು. ₹700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ದಾರ್‌ ಪಟೇಲ್‌ ಕ್ರೀಡಾಂಗಣವನ್ನು (ಮೊಟೆರಾ ಕ್ರಿಕೆಟ್‌ ಸ್ಟೇಡಿಯಂ) ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಪ್ರಧಾನಿ ಮೋದಿ ಅವರು ಇದೇ ತಿಂಗಳ 24ರಂದು ಉದ್ಘಾಟಿಸಲಿದ್ದಾರೆ.

ಈಗ ಭವ್ಯ ಕ್ರೀಡಾಂಗಣ ನಿರ್ಮಾಣವಾಗಿರುವ ಜಾಗದಲ್ಲೇ ಹಿಂದೆ ಸರ್ದಾರ್‌ ಪಟೇಲ್‌ ಕ್ರೀಡಾಂಗಣವಿತ್ತು. ಅದರ ಆಸನ ಸಾಮರ್ಥ್ಯವು 53,000 ಇತ್ತು. ಹೊಸ ವಿನ್ಯಾಸ ಮತ್ತು ಹೆಚ್ಚು ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ 2015ರಲ್ಲಿ ಅದನ್ನು ಕೆಡವಲಾಯಿತು. 2017ರ ಜನವರಿಯಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿತ್ತು. ಲಾರ್ಸನ್‌ ಆ್ಯಂಡ್‌ ಟುಬ್ರೊ ಸಂಸ್ಥೆ ಎರಡು ವರ್ಷಗಳಲ್ಲಿ ಹೊಸ ಕ್ರೀಡಾಂಗಣವನ್ನು ನಿರ್ಮಿಸಿದೆ.

ಕ್ರೀಡಾಂಗಣದ ವೈಶಿಷ್ಟ್ಯ

ಮೂರು ಮಾದರಿಯ ಪಿಚ್‌

ಈ ಕ್ರೀಡಾಂಗಣದೊಳಗೆ ಕೆಂಪು ಮತ್ತು ಕಪ್ಪು ಮಣ್ಣನ್ನು ಬಳಸಿ ಮೂರು ರೀತಿಯ ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಇಂಥ 11 ಪಿಚ್‌ಗಳನ್ನು ಈ ಕ್ರೀಡಾಂಗಣ ಹೊಂದಿರಲಿದೆ. ಕೆಲವನ್ನು ಸಂಪೂರ್ಣವಾಗಿ ಕೆಂಪು ಮಣ್ಣಿನಿಂದ, ಇನ್ನೂ ಕೆಲವನ್ನು ಕಪ್ಪು ಮಣ್ಣಿನಿಂದ ಹಾಗೂ ಮತ್ತೆ ಕೆಲವನ್ನು ಎರಡೂ ಮಣ್ಣುಗಳ ಮಿಶ್ರಣದಿಂದ ಸಿದ್ಧಪಡಿಸಲಾಗಿದೆ ಎಂದು ಗುಜರಾತ್‌ ಕ್ರಿಕೆಟ್‌ ಅಸೋಸಿಯೇಷನ್‌ ಹೇಳಿದೆ. ಇದಕ್ಕಾಗಿ ಬೇರೆ ರಾಜ್ಯಗಳಿಂದಲೂ ಮಣ್ಣನ್ನು ತರಿಸಲಾಗಿದೆ.

ಎರಡು ಹಂತದ ಆಸನ ವ್ಯವಸ್ಥೆ

ತಲಾ 50,000 ಸಾಮರ್ಥ್ಯದ ಎರಡು ಹಂತದ ಆಸನ ವ್ಯವಸ್ಥೆ ಈ ಕ್ರೀಡಾಂಗಣದಲ್ಲಿ ಇದೆ. ಯಾವ ಗ್ಯಾಲರಿಯ, ಯಾವ ಆಸನದಲ್ಲಿ ಕುಳಿತರೂ ಯಾವುದೇ ಅಡೆತಡೆಗಳಿಲ್ಲದೆ, ಇಡೀ ಕ್ರೀಡಾಂಗಣ ಸ್ಪಷ್ಟವಾಗಿ ಕಾಣುತ್ತದೆ ಎಂದು ಜಿಸಿಎ ಹೇಳಿದೆ.

ಮೇಲ್ಮೈ ಒಣಗಿಸುವ ತಂತ್ರಜ್ಞಾನ (ಸಬ್‌ ಏರ್‌ ಸಿಸ್ಟಂ): ಮಳೆ ಬಂದು ಕ್ರೀಡಾಂಗಣದ ಮೇಲ್ಮೈ ಒದ್ದೆಯಾಗಿ ಪಂದ್ಯಗಳು ರದ್ದಾದ ಸಂದರ್ಭಗಳು ನೂರಾರು ಇವೆ. ಇಂಥ ಸಮಸ್ಯೆಯನ್ನು ನಿವಾರಿಸಲು ಈ ಕ್ರೀಡಾಂಗಣದಲ್ಲಿ ಮೇಲ್ಮೈಯನ್ನು ಒಣಗಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮಳೆ ನಿಂತು ಅರ್ಧ ಗಂಟೆಯೊಳಗೆ ಮೇಲ್ಮೈ ಸಂಪೂರ್ಣವಾಗಿ ಒಣಗಿ ಕ್ರೀಡಾಂಗಣವು ಆಟ ಮುಂದುವರಿಸಲು ಸಿದ್ಧವಾಗುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಈ ವ್ಯವಸ್ಥೆ ಇದೆ.

ಕಾರ್ಪೊರೇಟ್‌ ಪ್ರತಿನಿಧಿಗಳಿಗಾಗಿ ಹವಾನಿಯಂತ್ರಣ ವ್ಯವಸ್ಥೆಯ 76 ಕಾರ್ಪೊರೇಟ್‌ ಬಾಕ್ಸ್‌ಗಳು, ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ನಾಲ್ಕು ಡ್ರೆಸ್ಸಿಂಗ್‌ ಕೊಠಡಿಗಳು ಹಾಗೂ ಇತರ ಅಗತ್ಯ ಸೌಲಭ್ಯಗಳು, ಒಂದು ಕ್ಲಬ್‌ ಹೌಸ್‌ ಹಾಗೂ ಒಲಿಂಪಿಕ್‌ ಗಾತ್ರದ ಈಜು
ಕೊಳವೂ ಕ್ರೀಡಾಂಗಣದ ಸಂಕೀರ್ಣದಲ್ಲಿ ಇದೆ.

3,000 ಕಾರುಗಳು ಹಾಗೂ 10,000 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ. ವಾಹನ ಸಂಚಾರ ಮತ್ತು ಜನರ ಓಡಾಟಕ್ಕೆ ತೊಂದರೆ ಆಗದಂತೆ, ನೆಲಮಟ್ಟದಲ್ಲಿ ವಾಹನಗಳ ಓಡಾಟ ಹಾಗೂ ಸುಮಾರು 35 ಅಡಿ ಎತ್ತರದಲ್ಲಿ ಜನರ ಓಡಾಟಕ್ಕೆ ವ್ಯವಸ್ಥೆ

ಸ್ಟೇಡಿಯಂ ಸಮೀಪದಲ್ಲಿ ಹೊರಾಂಗಣ ಅಭ್ಯಾಸಕ್ಕಾಗಿ ಮೂರು ಕ್ರೀಡಾಂಗಣಗಳು, ಒಳಾಂಗಣ ಅಭ್ಯಾಸಕ್ಕಾಗಿ ಆರು ಪಿಚ್‌ಗಳ ವ್ಯವಸ್ಥೆ. ಗರಿಷ್ಠ 40 ಕ್ರೀಡಾಪಟುಗಳು ಉಳಿದುಕೊಳ್ಳಲು ಬೇಕಾದ ವ್ಯವಸ್ಥೆಯೂ ಇರಲಿದೆ

ಕ್ರೀಡಾಂಗಣದ 63 ಎಕರೆ ವಿಸ್ತಾರದ ಪ್ರದೇಶದಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಘಟಕವನ್ನೂ
ಅಳವಡಿಸಲಾಗಿದೆ.

*ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್, ಆಸ್ಟ್ರೇಲಿಯಾ

ಆಸನ ಸಾಮರ್ಥ್ಯ:1 ಲಕ್ಷ

*ಈಡನ್ ಗಾರ್ಡನ್ಸ್, ಕೋಲ್ಕೊತ್ತ

ಆಸನ ಸಾಮರ್ಥ್ಯ:68 ಸಾವಿರ

 

*‌ಶಹೀದ್ ವೀರ್‌ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ, ನಯಾ ರಾಯಪುರ

ಆಸನ ಸಾಮರ್ಥ್ಯ:65 ಸಾವಿರ

 

 

*ಪರ್ತ್‌ ಸ್ಟೇಡಿಯಂ, ಆಸ್ಟ್ರೇಲಿಯಾ

ಆಸನ ಸಾಮರ್ಥ್ಯ:60 ಸಾವಿರ

 

 

*ಜವಾಹರಲಾಲ್ ನೆಹರೂ ಸ್ಟೇಡಿಯಂ, ಕೇರಳ

ಆಸನ ಸಾಮರ್ಥ್ಯ:60 ಸಾವಿರ

 

 

*ಡಿ.ವೈ ಪಾಟೀಲ್ ಸ್ಟೇಡಿಯಂ, ಮಹಾರಾಷ್ಟ್ರ

ಆಸನ ಸಾಮರ್ಥ್ಯ:55 ಸಾವಿರ

 

 

*ರಾಜೀವ್‌ಗಾಂಧಿ ಕ್ರಿಕೆಟ್ ಸ್ಟೇಡಿಯಂ, ಹೈದರಾಬಾದ್

ಆಸನ ಸಾಮರ್ಥ್ಯ:55 ಸಾವಿರ

 

 

*ಎಂಸಿಎ ಪುಣೆ ಕ್ರಿಕೆಟ್ ಸೆಂಟರ್, ಮಹಾರಾಷ್ಟ್ರ

ಆಸನ ಸಾಮರ್ಥ್ಯ:55 ಸಾವಿರ

 

 

*ಅಡಿಲೇಡ್ ಓವಲ್, ಆಸ್ಟ್ರೇಲಿಯಾ

ಆಸನ ಸಾಮರ್ಥ್ಯ:53 ಸಾವಿರ

 

 

*ಎಂ.ಎ.ಚಿದಂಬರಂ ಸ್ಟೇಡಿಯಂ, ಚೆನ್ನೈ

ಆಸನ ಸಾಮರ್ಥ್ಯ:50 ಸಾವಿರ

 

 

*ಫಿರೋಜ್‌ ಷಾ ಕೋಟ್ಲಾ ಗ್ರೌಂಡ್, ದೆಹಲಿ

ಆಸನ ಸಾಮರ್ಥ್ಯ:55 ಸಾವಿರ

 

 

*ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ರಾಂಚಿ

ಆಸನ ಸಾಮರ್ಥ್ಯ:50 ಸಾವಿರ

 

 

*ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಸ್ಟೇಡಿಯಂ, ತಿರುವನಂತಪುರ

ಆಸನ ಸಾಮರ್ಥ್ಯ:50 ಸಾವಿರ

 

 

*ಅಟಲ್‌ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂ, ಲಖನೌ

ಆಸನ ಸಾಮರ್ಥ್ಯ:50 ಸಾವಿರ

 

 

*ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಆಸನ ಸಾಮರ್ಥ್ಯ:40 ಸಾವಿರ 

 

 

ನಿರ್ಮಾಣ ಹಂತದ ಸ್ಟೇಡಿಯಂಗಳು

*ಫೈಜಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಅಯೋಧ್ಯೆ

ಆಸನ ಸಾಮರ್ಥ್ಯ: 88 ಸಾವಿರ

ಕಾಮಗಾರಿ ಪೂರ್ಣ:2022

 

 

*ಗ್ವಾಲಿಯರ್ ಅಂತರರಾಷ್ಟ್ರೀಯ ಸ್ಟೇಡಿಯಂ, ಮಧ್ಯಪ್ರದೇಶ

ಆಸನ ಸಾಮರ್ಥ್ಯ: 60 ಸಾವಿರ

ಕಾಮಗಾರಿ ಪೂರ್ಣ:2021

 

 

*ನಳಂದಾ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಬಿಹಾರ

ಆಸನ ಸಾಮರ್ಥ್ಯ: 50 ಸಾವಿರ

ಕಾಮಗಾರಿ ಪೂರ್ಣ:2021

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು