ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ ಟೆಸ್ಟ್: ಉತ್ತಮ ಮುನ್ನಡೆಯತ್ತ ಆಸ್ಟ್ರೇಲಿಯಾ

Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಅಕ್ಷರ ಗಾತ್ರ

ಲೀಡ್ಸ್: ಆಸ್ಟ್ರೇಲಿಯಾ ತಂಡವು ಆ್ಯಷಸ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಉತ್ತಮ ಮುನ್ನಡೆ ಸಾಧಿಸಿದೆ.

ಮಳೆಯಿಂದಾಗಿ ತಡವಾಗಿ ಆರಂಭವಾದ ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 61 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 176 ರನ್ ಗಳಿಸಿದೆ. ಇದರೊಂದಿಗೆ ಒಟ್ಟು 206 ರನ್‌ಗಳ ಮುನ್ನಡೆ ಸಾಧಿಸಿದೆ.

ಟ್ರಾವಿಸ್ ಹೆಡ್ (43; 88ಎ) ಮತ್ತು ಮಿಚೆಲ್ ಮಾರ್ಷ್ (28; 52ಎ) ಅವರು ಮಹತ್ವದ ಕಾಣಿಕೆ ನೀಡಿದರು. ಆದರೆ ಪ್ರಮುಖ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡದಂತೆ ಇಂಗ್ಲೆಂಡ್ ಬೌಲರ್‌ಗಳಾದ ಕ್ರಿಸ್ ವೋಕ್ಸ್ (60ಕ್ಕೆ3) ಮತ್ತು ಮಾರ್ಕ್ ವುಡ್ (39ಕ್ಕೆ2)  ಅಡ್ಡಿಯಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 60.4 ಓವರ್‌ಗಳಲ್ಲಿ 263. ಇಂಗ್ಲೆಂಡ್: 52.3 ಓವರ್‌ಗಳಲ್ಲಿ 237. ಎರಡನೇ ಇನಿಂಗ್ಸ್: 61 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 176 (ಉಸ್ಮಾನ್ ಖ್ವಾಜಾ 43, ಮಾರ್ನಸ್ ಲಾಬುಷೇನ್ 33, ಟ್ರಾವಿಸ್ ಹೆಡ್ 34, ಮಿಚೆಲ್ ಮಾರ್ಷ್ 28, ಮಿಚೆಲ್ ಸ್ಟಾರ್ಕ್ 16, ಕ್ರಿಸ್ ವೋಕ್ಸ್ 51ಕ್ಕೆ3, ಮಾರ್ಕ್ ವುಡ್ 39ಕ್ಕೆ2,)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT