ಬೆಂಗಳೂರು: ನಾಯಕನಿಗೆ ತಕ್ಕ ಆಟವಾಡಿದ ನಿಕಿನ್ ಜೋಸ್ ಅವರ ಜವಾಬ್ದಾಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಇಲೆವನ್ ತಂಡವು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಚೇತರಿಸಿಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಧ್ಯಪ್ರದೇಶ ತಂಡವು 101.2 ಓವರ್ಗಳಲ್ಲಿ 338 ರನ್ ಗಳಿಸಿತು. ಅದಕ್ಕುತ್ತರವಾಗಿ ಕೆಎಸ್ಸಿಎ ತಂಡವು ಶನಿವಾರ ದಿನದಾಟದ ಮುಕ್ತಾಯಕ್ಕೆ 58 ಓವರ್ಗಳಲ್ಲಿ 4 ವಿಕೆಟ್ಗಳಿಗೆ 163 ರನ್ ಗಳಿಸಿದೆ. ನಿಕಿನ್ (ಬ್ಯಾಟಿಂಗ್ 58; 133ಎಸೆತ) ಮತ್ತು ಪಿ ಧ್ರುವ (ಬ್ಯಾಟಿಂಗ್ 28) ಅವರು ತಂಡದ ಕುಸಿತ ತಡೆದರು.

ಕುಮಾರ್ ಕಾರ್ತಿಕೇಯ (35ಕ್ಕೆ2) ಅವರ ಪರಿಣಾಮಕಾರಿ ದಾಳಿಯಿಂದಾಗಿ ಕರ್ನಾಟಕ ತಂಡವು ಇನಿಂಗ್ಸ್ ಆರಂಭದಲ್ಲಿ ಆಘಾತ ಅನುಭವಿಸಿತು. 74 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಲೋಚನ್ ಎಸ್ ಗೌಡ (20; 55ಎ), ತುಷಾರ್ ಸಿಂಗ್ (35; 72ಎ), ಫೈಜಾನ್ ಖಾನ್ (1; 3ಎ) ಅವರು ಬೇಗನೆ ನಿರ್ಗಮಿಸಿದರು.

ಆದರೆ ಇನ್ನೊಂದು ಬದಿಯಲ್ಲಿ ತಾಳ್ಮೆಯಿಂದ ಆಡುತ್ತಿದ್ದ ನಿಕಿನ್ ಇನಿಂಗ್ಸ್ಗೆ ಬಲ ತುಂಬಿದರು. ಅವರೊಂದಿಗೆ ಒಂದಿಷ್ಟು ಹೊತ್ತು ಕ್ರೀಸ್ನಲ್ಲಿದ್ದ ಸಮಿತ್ ದ್ರಾವಿಡ್ 25 ಎಸೆತಗಳಲ್ಲಿ 9 ರನ್ ಗಳಿಸಿದರು. ಆರ್ಯನ್ ಪಾಂಡೆ ಬೌಲಿಂಗ್ನಲ್ಲಿ ಹಿಮಾಂಶು ಮಂತ್ರಿ ಪಡೆದ ಕ್ಯಾಚ್ಗೆ ಸಮಿತ್ ಔಟಾದರು. ನಿಕಿನ್ ಜೊತೆಗೂಡಿದ ಧ್ರುವ ಅವರು ತಾಳ್ಮೆಯ ಆಟವಾಡಿದರು. ಇದರೊಂದಿಗೆ ವಿಕೆಟ್ ಪತನಕ್ಕೆ ತಡೆಯೊಡ್ಡಿದರು.

ಪಂದ್ಯದಲ್ಲಿ ಇನ್ನೆರಡು ದಿನಗಳು ಬಾಕಿ ಇವೆ. ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವ ತಂಡಕ್ಕೆ ಪ್ರಶಸ್ತಿ ಗೆಲುವಿನ ಅವಕಾಶ ಹೆಚ್ಚು.

ಇದಕ್ಕೂ ಮುನ್ನ ಮಧ್ಯಪ್ರದೇಶ ತಂಡದ ವೆಂಕಟೇಶ್ ಅಯ್ಯರ್ (48 ರನ್) ಕೇವಲ ಎರಡು ರನ್ಗಳ ಅಂತರದಲ್ಲಿ ಅರ್ಧಶತಕ ತಪ್ಪಿಸಿಕೊಂಡರು. ಕರ್ನಾಟಕದ ವೇಗಿ ಎಂ. ವೆಂಕಟೇಶ್ ಅವರು (75ಕ್ಕೆ5) ಮಿಂಚಿದರು.

ಸಂಕ್ಷಿಪ್ತ ಸ್ಕೋರು:

ಮಧ್ಯಪ್ರದೇಶ: 101.2 ಓವರ್ಗಳಲ್ಲಿ 338 (ವೆಂಕಟೇಶ್ ಅಯ್ಯರ್ 48, ಎಂ. ವೆಂಕಟೇಶ್ 75ಕ್ಕೆ5, ಮಾಧವ್ ಪಿ ಬಜಾಜ್ 105ಕ್ಕೆ3)

ಕೆಎಸ್ಸಿಎ ಕಾರ್ಯದರ್ಶಿ ಇಲೆವನ್: 58 ಓವರ್ಗಳಲ್ಲಿ 4ಕ್ಕೆ163 (ಲೋಚನ್ ಎಸ್ ಗೌಡ 20, ಎಸ್.ಜೆ. ನಿಕಿನ್ ಜೋಸ್ ಔಟಾಗದೇ 58, ತುಷಾರ್ ಸಿಂಗ್ 35, ಪಿ. ಧ್ರುವ ಔಟಾಗದೇ 28, ಕುಮಾರ ಕಾರ್ತಿಕೇಯ 35ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.