ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KKR vs DC | ಈ ಸೋಲು ಅರಗಿಸಿಕೊಳ್ಳಲಾಗದು: ಪಾಂಟಿಂಗ್

Published 4 ಏಪ್ರಿಲ್ 2024, 15:19 IST
Last Updated 4 ಏಪ್ರಿಲ್ 2024, 15:19 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರಿನ ಸೋಲನ್ನು ಸ್ವೀಕರಿಸಲಾಗದು ಮತ್ತು ಮುಜುಗರದ ಸಂಗತಿಯೂ ಆಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತ್ತ ತಂಡವು 272 ರನ್‌ಗಳನ್ನು ಪೇರಿಸಿತ್ತು. ಐಪಿಎಲ್ ಇತಿಹಾಸದಲ್ಲಿಯೇ ಇದು ಎರಡನೇ ಅತಿ ದೊಡ್ಡ ಮೊತ್ತವಾಗಿ ದಾಖಲಾಯಿತು. ಡೆಲ್ಲಿ ತಂಡವು 17.2 ಓವರ್‌ಗಳಲ್ಲಿ 166 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. 

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಟಿಂಗ್, ‘ಈ ಹೊತ್ತಿನಲ್ಲಿ ವಿಶ್ಲೇಷಣೆ ಮಾಡುವುದು ಕಷ್ಟ. ಮೊದಲಾರ್ಧದಲ್ಲಿ ಆಡಿದ ಆಟವು ತೀರಾ ಮುಜುಗರವಾಗಿತ್ತು. ಬಹಳಷ್ಟು ರನ್‌ಗಳನ್ನು ಬಿಟ್ಟುಕೊಟ್ಟೆವು. 17 ವೈಡ್‌ಗಳಾದವು. ನಮ್ಮ ಪಾಲಿನ ಓವರ್‌ಗಳನ್ನು ಮುಗಿಸಲು ಎರಡು ತಾಸುಗಳಿಗೂ ಹೆಚ್ಚು ಸಮಯ ಹಿಡಿಯಿತು. ಇದರಿಂದಾಗಿ ಕೊನೆಯ ಎರಡು ಓವರ್‌ಗಳಲ್ಲಿ ನಾಲ್ವರು ಫೀಲ್ಡರ್‌ಗಳು ವೃತ್ತದಿಂದ ಹೊರಗಿದ್ದರು’ ಎಂದರು. 

‘ಬೌಲಿಂಗ್‌ನಲ್ಲಿ ಬಹಳಷ್ಟು ಲೋಪಗಳಾಗಿವೆ. ಫೀಲ್ಟಿಂಗ್ ನಿಯೋಜನೆ ಮತ್ತು ಡಿಆರ್‌ಎಸ್ ಪಡೆಯುವ ವಿಷಯದಲ್ಲಿ ಕೆಲವು ತಪ್ಪು ನಿರ್ಣಯಗಳಾದವು. ಇವೆಲ್ಲವುಗಳ ಬಗ್ಗೆ ನಾಯಕ ರಿಷಭ್ ಮತ್ತು ತಂಡದೊಂದಿಗೆ ಮಾತನಾಡಬೇಕಿದೆ. ಎಲ್ಲವನ್ನೂ ಸರಿಪಡಿಸಬೇಕಿದೆ’ ಎಂದರು. 

‘18 ವರ್ಷದ ಅಂಗಕ್ರಿಶ್ ರಘುವಂಶಿ ತುಂಬಾ ಚೆನ್ನಾಗಿ ಆಡಿದರು. ಅದರಿಂದಾಗಿ ಆ್ಯಂಡ್ರೆ ರಸೆಲ್ ಅವರು ಮುಕ್ತವಾಗಿ ಆಡಲು ಸಾಧ್ಯವಾಯಿತು. ಏಕೆಂದರೆ ಆ ಸಂದರ್ಭದಲ್ಲಿ ಅವರ ತಂಡದ ಖಾತೆಯಲ್ಲಿ ಇನ್ನೂ ವಿಕೆಟ್‌ಗಳು ಬಾಕಿಯಿದ್ದವು’ ಎಂದು ಪಾಂಟಿಂಗ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT