ಶುಕ್ರವಾರ, ಸೆಪ್ಟೆಂಬರ್ 17, 2021
31 °C

ಕ್ರಿಕೆಟರ್ ವೇದಾ ಕೃಷ್ಣಮೂರ್ತಿಗೆ ಕಂಕಣ ಭಾಗ್ಯ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಹಸೆಮಣೆ ಏರುವ ಸಂತಸದಲ್ಲಿದ್ದಾರೆ.

ತಮ್ಮ ಮದುವೆ ಖುಷಿಯನ್ನು ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ನನ್ನಂತೆಯೇ ಇರುವ ಪುರುಷ ರೂಪ. ಈ ಲಲಿತ್ ಚೌಧರಿ. ಸದ್ಯದಲ್ಲೇ ಮದುವೆ ಇದೆ’ ಎಂದು ಬರೆದುಕೊಂಡಿದ್ದು, ಮದುವೆಯಾಗುವ ಹುಡುಗನ ಭುಜದ ಮೇಲೆ ಒರಗಿ ನಗುತ್ತಾ ಫೋಸ್‌ ಕೊಟ್ಟಿರುವ ಫೋಟೊವನ್ನು ಹಾಕಿದ್ದಾರೆ.

ಕಡೂರಿನ ಕ್ರಿಕೆಟ್‌ ಪ್ರತಿಭೆ ವೇದಾ

ಕ್ರಿಕೆಟ್‌ ಲೋಕದ ಮಿನುಗು ತಾರೆ, ಚಿಕ್ಕಮಗಳೂರಿನ ವೇದಾ ಕೃಷ್ಣಮೂರ್ತಿ, ಕಡೂರಿನಲ್ಲಿ ಜನಿಸಿದ ವೇದಾ, 13ನೇ ವಯಸ್ಸಿನಲ್ಲಿ ಕ್ರಿಕೆಟ್‌ ರಂಗಕ್ಕೆ ಅಡಿ ಇಟ್ಟರು. ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನಲ್ಲಿ ಆಟದ ಪಾಠಗಳನ್ನು ಕಲಿತ ಅವರು ಜೂನಿಯರ್‌ ಹಂತದ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದರು. 2009ರಲ್ಲಿ ಕರ್ನಾಟಕ ಸೀನಿಯರ್‌ ತಂಡಕ್ಕೆ ಆಯ್ಕೆಯಾಗಿದ್ದ ವೇದಾ 2011ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಜೂನ್‌ 30ರಂದು ಡರ್ಬಿಯಲ್ಲಿ ಇಂಗ್ಲೆಂಡ್‌ ಎದುರು ಮೊದಲ ಏಕದಿನ ಪಂದ್ಯ ಆಡಿದ್ದರು. ಇದುವರೆಗೂ 48 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 25.90ರ ಸರಾಸರಿಯಲ್ಲಿ 829ರನ್‌ ದಾಖಲಿಸಿದ್ದಾರೆ. ಇದರಲ್ಲಿ ಎಂಟು ಅರ್ಧಶತಕಗಳು ಸೇರಿವೆ. ಟ್ವೆಂಟಿ–20 ಮಾದರಿಯಲ್ಲೂ ಅವರು ಹೆಜ್ಜೆ ಗುರುತು ಮೂಡಿಸಿದ್ದಾರೆ. 26ರ ಹರೆಯದ ವೇದಾ, 2017ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತ ತಂಡದಲ್ಲಿ ಆಡಿದ್ದರು. ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್‌ಬಾಷ್‌ ಲೀಗ್‌ನಲ್ಲಿ ಭಾಗವಹಿಸಿದ ಭಾರತದ ಮೂರನೇ ಆಟಗಾರ್ತಿ ಎಂಬ ಹಿರಿಮೆಯೂ ಅವರದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು