ಭಾನುವಾರ, ಮಾರ್ಚ್ 7, 2021
19 °C
2008ರ ವಿಶ್ವಕಪ್‌

19 ವರ್ಷದೊಳಗಿನವರ ವಿಶ್ವಕಪ್ ‘ಸೆಮಿ’ಯಲ್ಲಿ ವಿಲಿಯಮ್ಸನ್ ವಿಕೆಟ್ ಪಡೆದಿದ್ದ ವಿರಾಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯಾನ್‌ಚೆಸ್ಟರ್‌: ಟೂರ್ನಿಯ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ 7ನೇ ಬಾರಿಗೆ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿದ್ದರೆ, ನ್ಯೂಜಿಲೆಂಡ್‌ 8ನೇ ಬಾರಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಂತಾಗಿದೆ. 

ಟೀಂ ಇಂಡಿಯಾ ಮುನ್ನಡೆಸುತ್ತಿರುವ ವಿರಾಟ್‌ ಕೊಹ್ಲಿ ಮತ್ತು ಕಿವೀಸ್ ಸಾರಥಿ ಕೇನ್‌ ವಿಲಿಯಮ್ಸನ್‌ 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಸೆಮಿಫೈನಲ್ ಹಣಾಹಣಿಯಲ್ಲೂ ಎದುರಾಗಿದ್ದರು. ಆಗ ಬ್ಲೂ ಬಾಯ್ಸ್‌ ತಂಡವನ್ನು ಕೊಹ್ಲಿ ಹಾಗೂ ಕಪ್ಪು ಟೊಪ್ಪಿಯ ಪಡೆಯನ್ನು ವಿಲಿಯಮ್ಸನ್‌ ಅವರೇ ಮುನ್ನಡೆಸಿದ್ದರು ಎಂಬುದು ವಿಶೇಷ. 

ಇದನ್ನೂ ಓದಿ: ವಿಶ್ವಕಪ್‌ ಫೈನಲ್‌ಗೆ ಎರಡು ಪಂದ್ಯ ಬಾಕಿ; ಪಾಯಿಂಟ್‌ ಪಟ್ಟಿಯಲ್ಲಿ ಭಾರತ ನಂ.1

ಆಲ್‌ರೌಂಡರ್ ಪ್ರದರ್ಶನ ತೋರಿದ್ದ ವಿರಾಟ್‌ ಕೊಹ್ಲಿ, ವಿಲಿಯಮ್ಸನ್‌ ವಿಕೆಟ್‌ ಕಬಳಿಸುವ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದ್ದರು. ಭಾರತ 3 ವಿಕೆಟ್‌ ಗೆಲುವು ಸಾಧಿಸಿತ್ತು. 

ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಮಿಂಚಿದ್ದ ಕೊಹ್ಲಿ, 7 ಓವರ್‌ ಬೌಲಿಂಗ್‌ ಮಾಡಿ ಕೇವಲ 27 ರನ್‌ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದರು. ಮೊದಲು ಬ್ಯಾಟಿಂಗ್‌ ನಡೆಸಿದ್ದ ಕಿವೀಸ್‌ ಪಡೆ, 8 ವಿಕೆಟ್‌ ನಷ್ಟಕ್ಕೆ 205 ರನ್‌ ದಾಖಲಿಸಿತ್ತು. ಆನಂತರದಲ್ಲಿ ತಲುಪಬೇಕಾಗದ ಗುರಿಯನ್ನು 191ರನ್‌ಗಳಿಗೆ ನಿಗದಿ ಪಡಿಸಲಾಗಿತ್ತು. ವಿರಾಟ್‌ ಪಡೆ ಮೂರು ವಿಕೆಟ್‌ ಉಳಿಸಿಕೊಂಡು ಗುರಿಯನ್ನು ಸಾಧಿಸಿತ್ತು. ಕೊಹ್ಲಿ ಆ ಪಂದ್ಯದಲ್ಲಿ 43 ರನ್‌ ಬಾರಿಸಿದ್ದರು. 

ಇದನ್ನೂ ಓದಿ: ಟೀಂ ಇಂಡಿಯಾದ ಕೂಲ್‌ ಮ್ಯಾನ್‌ ಮಹೇಂದ್ರ ಸಿಂಗ್‌ ಧೋನಿ; ಸಾಧನೆ ಇಂದಿಗೂ ಜೀವಂತ!

ರವೀಂದ್ರ ಜಡೇಜಾ, ಟ್ರೆಂಟ್‌ ಬೌಲ್ಟ್‌ ಮತ್ತು ಟಿಮ್‌ ಸೌಥೀ ಸಹ ಮಲೇಷಿಯಾದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾಗಿಯಾಗಿದ್ದರು. ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿ, 19 ವರ್ಷದೊಳಗಿನವರ ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು. 

ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ರೋಹಿತ್‌ ಶರ್ಮಾ 2008ರಲ್ಲಿ ಕಾಮನ್‌ವೆಲ್ತ್‌ ಬ್ಯಾಂಕ್‌ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಡಿದ್ದರು. ಆಗ ರೋಹಿತ್‌ 10 ಇನಿಂಗ್ಸ್‌ಗಳಲ್ಲಿ 235 ರನ್‌ ಗಳಿಸಿದ್ದರು. 

ಇದನ್ನೂ ಓದಿ: ಬದಲಾದ ಬ್ಯಾಟು ಹೇಳುತ್ತಿದೆಯಾ ಧೋನಿ ವಿದಾಯದ ಮುನ್ನುಡಿ?!

2003ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ–ನ್ಯೂಜಿಲೆಂಡ್‌ ಎದುರಾಗಿದ್ದವು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆದಿತ್ತು. ನಂತರದ ವಿಶ್ವಕಪ್‌ ಪಂದ್ಯಗಳಲ್ಲಿ ಎರಡೂ ತಂಡಗಳು ಎದುರಾಗುವ ಅವಕಾಶವೇ ಒದಗಿ ಬಂದಿರಲಿಲ್ಲ. 16 ವರ್ಷಗಳ ನಂತರ ಇದೀಗ ಮತ್ತೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ರೌಂಡ್‌ರಾಬಿನ್‌ ಹಂತದಲ್ಲಿ ಭಾರತ–ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು. 

ವಿಶ್ವಕಪ್‌ ಕ್ರಿಕೆಟ್‌ ನಿಯಮಗಳ ಪ್ರಕಾರ, ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ತಂಡ ಸೆಮಿಫೈನಲ್‌ನಲ್ಲಿ ಎದುರಾಗುತ್ತವೆ. ಜುಲೈ 9ರಂದು ಮ್ಯಾನ್‌ಚೆಸ್ಟರ್‌ನಲ್ಲಿ ಭಾರತ–ನ್ಯೂಜಿಲೆಂಡ್‌ ನಡುವೆ ಮೊದಲ ಸೆಮಿಫೈನಲ್‌ ಹಣಾಹಣಿ ನಡೆಯಲಿದೆ. 

ಇದನ್ನೂ ಓದಿ: ಫೈನಲ್‌ಗೆ ಭಾರತ–ಇಂಗ್ಲೆಂಡ್ | ನಿಜವಾಗುತ್ತಾ ಗೂಗಲ್ ಸಿಇಒ ಭವಿಷ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು