ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಕ್ಷಮೆ ಎಂಬುದೇ ಉಳಿದಿಲ್ಲ: ಸೋಲಿನ ಬಳಿಕ ಆರ್‌ಸಿಬಿ ನಾಯಕ ಕೊಹ್ಲಿ ಮಾತು

Last Updated 8 ಏಪ್ರಿಲ್ 2019, 5:12 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಲ್‌ನ 12 ಅವೃತ್ತಿಯಲ್ಲಿ ಸತತ 6 ಸೋಲು ಕಂಡು ಸಂಕಷ್ಟಕ್ಕೆ ಸಿಲುಕಿರುವ ರಾಯಲ್‌ ಚಾಲೆಂಜರ್‌ ಬೆಂಗಳೂರು (ಆರ್‌ಸಿಬಿ)ನಾಯಕ ವಿರಾಟ್‌ ಕೊಹ್ಲಿ ತಂಡದಆಟಗಾರರ ಪ್ರದರ್ಶನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಇನ್ನು ಕ್ಷಮೆ ಎಂಬುದೇ ನನ್ನ ಬಳಿ ಉಳಿದಿಲ್ಲ,’ ಎಂದಿದ್ದಾರೆ.ದೆಹಲಿ ವಿರುದ್ಧ ಭಾನುವಾರ ತವರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ಗಳಲ್ಲಿ ನೀರಸ ಪ್ರದರ್ಶನ ನೀಡಿ, ತವರು ಅಭಿಮಾನಿಗಳ ಸಮ್ಮುಖದಲ್ಲೇ ಈ ಆವೃತ್ತಿಯ ಆರನೇ ಸೋಲನ್ನುಅನುಭವಿಸಿತು.

ತಂಡದ ಕಳಪೆ ಪ್ರದರ್ಶನದ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ವಿರಾಟ್‌ ಕೊಹ್ಲಿ, ‘ಈ ವರೆಗೆ ಐಪಿಎಲ್‌ ಪ್ರಶಸ್ತಿಯನ್ನೇ ಗೆಲ್ಲದ ತಂಡ, ಈಗ 8 ತಂಡಗಳ ಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದೆ. ತನ್ನ ತಂಡದ ಆಟದಿಂದ ನಾಯಕನಾದವನು ನಿರಾಶೆಗೊಂಡಿದ್ದಾನೆ,’ ಎಂದು ಅವರು ಹೇಳಿದ್ದಾರೆ.

‘ನಾವು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಪ್ರತಿದಿನವೂ ಕ್ಷಮೆ ನೀಡಲು ಸಾಧ್ಯವಿಲ್ಲ. ಈ ದಿನ ನಾವು ಉತ್ತಮವಾಗಿ ಆಡಲಿಲ್ಲ ಎಂಬುದು ಎಂದಿನ ಕತೆಯಂತಾಗಿದೆ. ಇದು ಆರ್‌ಸಿಬಿಯ ಇಡೀ ಐಪಿಎಲ್‌ ಯಾನದ ಕತೆಯೂ ಆಗಿದೆ,’ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

‘ಮನಸು ಚಂಚಲಗೊಂಡರೆ ನಿಮ್ಮ ಬಳಿಗೇ ಬರುವ ಅವಕಾಶಗಳ ಮೇಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಆಟವಾಡುವಾಗ ಸ್ಪಷ್ಟ ಗಮನವಿರಬೇಕು,’ಎಂದು ಕೊಹ್ಲಿ ತಂಡದ ಆಟಗಾರರಿಗೆ ಸಲಹೆ ನೀಡಿದ್ದಾರೆ.

ಇನ್ನು ಭಾನುವಾರದ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಅವರ ಕ್ಯಾಚ್‌ ಡ್ರಾಪ್‌ ಆದ ಬಗ್ಗೆಯೂ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು. ‘4 ರನ್‌ಗಳಿದ್ದಾಗ ಅಯ್ಯರ್‌ ಕ್ಯಾಚ್‌ ಡ್ರಾಪ್‌ ಮಾಡಲಾಯಿತು. ನಂತರ ಅವರು 67ರನ್‌ ಗಳಿಸಿದರು. ಅವಕಾಶಗಳನ್ನು ಯಾರು ಯಾವಾಗ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನಾವು ಹೇಳಲು ಸಾಧ್ಯವೇ ಆಗುವುದಿಲ್ಲ,’ ಎನ್ನುವ ಮೂಲಕ ತಂಡ ಎಚ್ಚರವಾಗಿರಬೇಕು ಎಂಬುದನ್ನು ತಿಳಿಸಿದರು.

‘ತಂಡಕ್ಕೆ ಇನ್ನು ಹೇಳಲು ಹೆಚ್ಚೇನು ಉಳಿದಿಲ್ಲ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿಯಬೇಕು ಎಂದು ತಂಡದ ಸದಸ್ಯರಿಗೆ ಕೇಳಿಕೊಂಡಿದ್ದೇವೆ. ಈ ರೀತಿ ಎಂದೂ ಆಗಿರಲಿಲ್ಲ. ಇದು ವಾಸ್ತವ,’ ಎಂದು ಕೊಹ್ಲಿ ತಂಡಕ್ಕೆ ಜವಾಬ್ದಾರಿಯ ಪಾಠ ಹೇಳಿದ್ದಾರೆ.

ಭಾನುವಾರ ಆರ್‌ಸಿಬಿ ವಿರುದ್ಧ ಗೆದ್ದ ಇದೇ ದೆಹಲಿ ತಂಡ 2013ರ ಐಪಿಎಲ್‌ ಆವೃತ್ತಿಯಲ್ಲಿ ಸತತ ಆರು ಸೋಲುಗಳನ್ನು ಅನುಭವಿಸಿ ಭಾರಿ ಮುಖಭಂಗಕ್ಕೀಡಾಗಿತ್ತು. ಸದ್ಯ ಆರ್‌ಸಿಬಿ ಕೂಡ ಅದೇ ಪರಿಸ್ಥಿತಿಯಲ್ಲಿದ್ದು, ಪ್ಲೇಆಫ್‌ ತಲುಪುವ ಅವಕಾಶ ದುರ್ಲಬ ಎನಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT