ಭಾನುವಾರ, ಮಾರ್ಚ್ 29, 2020
19 °C

ಸಚಿನ್, ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ?: ಇಶಾಂತ್ ದೃಷ್ಟಿಯಲ್ಲಿ ಯಾರು ಗ್ರೇಟ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಅವರ ನಡುವಣ ಹೋಲಿಕೆ ಮತ್ತು ಇಬ್ಬರಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಸಾಕಷ್ಟು ದಿನಗಳಿಂದ ಚಾಲ್ತಿಯಲ್ಲಿದೆ.

ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ವಿರಾಟ್‌ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿರುವ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿದ್ದಾರೆ. ಈ ಇಬ್ಬರ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಂದ ಮೊದಲ್ಗೊಂಡು ತಜ್ಞರವರೆಗೆ ಒಬ್ಬೊಬ್ಬರದೂ ಒಂದೊಂದು ಅಭಿಪ್ರಾಯ.

ಇದೀಗ ಯಾರು ಶ್ರೇಷ್ಠ ಎಂಬುದಕ್ಕೆ ಸಂಬಂಧಿಸಿದಂತೆ ವೇಗದ ಬೌಲರ್‌ ಇಶಾಂತ್‌ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ರೀಡಾ ವೆಬ್‌ಸೈಟ್‌ ಕ್ರಿಕ್‌ಬಜ್‌ ಜೊತೆ ಮಾತನಾಡಿರುವ ಅವರು, ‘ಕ್ರಿಕೆಟ್‌ ಮೈದಾನದಲ್ಲಿ ನಾನು ಕಂಡ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ’ ಎಂದು ಹೇಳಿದ್ದಾರೆ.

2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸಚಿನ್‌, ಭಾರತ ಪರ 200 ಟೆಸ್ಟ್‌, 463 ಏಕದಿನ ಮತ್ತು 1ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 15,921 ರನ್‌, 18426ರನ್‌ ಹಾಗೂ 10 ರನ್ ಗಳಿಸಿದ್ದಾರೆ. ನೂರು ಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಶ್ರೇಯ ಅವರದು.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್‌ನ ನೂರನೇ ಶತಕ ಸಿಡಿಸಿದ್ದು ಇದೇ ದಿನ

ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ವಿರಾಟ್‌ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 70 ಶತಕಗಳಿದ್ದು, ಸಚಿನ್‌ ದಾಖಲೆ ಮುರಿಯಬಲ್ಲ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ ಇದವರೆಗೆ ಆಡಿರುವ ಒಟ್ಟು 248 ಏಕದಿನ ಪಂದ್ಯಗಳಿಂದ 11,867 ರನ್‌ ಗಳಿಸಿದ್ದಾರೆ. 86 ಟೆಸ್ಟ್‌ ಪಂದ್ಯಗಳಿಂದ 7,240 ರನ್‌ ಮತ್ತು 81 ಟಿ20 ಪಂದ್ಯಗಳಿಂದ 2,794 ರನ್‌ ಗಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು