ಸೋಮವಾರ, ಜೂನ್ 1, 2020
27 °C

ಶೇನ್ ವಾರ್ನ್ ಮೆಚ್ಚಿದ ಭಾರತ ತಂಡದಲ್ಲಿ ಕೊಹ್ಲಿ, ಧೋನಿಯಿಲ್ಲ: ಗಂಗೂಲಿಗೆ ನಾಯಕತ್ವ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಅವರು ಸಾರ್ವಕಾಲಿಕ ಭಾರತ ಇಲೆವನ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಆ ತಂಡದ ನಾಯಕತ್ವಕ್ಕೆ ಸೌರವ್ ಗಂಗೂಲಿಯನ್ನು ಹೆಸರಿಸಿದ್ದಾರೆ.

ಈ ತಂಡದಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು  ಅನಿಲ್ ಕುಂಬ್ಳೆ ಕೂಡ ಇದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, ಮೊಹಮ್ಮದ್ ಅಜರುದ್ದೀನ್ ಕೂಡ ಇದರಲ್ಲಿದ್ದಾರೆ.

‘ನಾನು ಆಡಿದ ಕಾಲಘಟ್ಟದಲ್ಲಿ ಆಡಿದ ಭಾರತೀಯ ಆಟಗಾರರನ್ನು ಆಯ್ಕೆ ಮಾಡಿದ್ದೇನೆ. ಆದ್ದರಿಂದ ಈ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರನ್ನು ಸೇರಿಸಿಲ್ಲ’ ಎಂದು ವಾರ್ನ್‌ ಹೇಳಿದ್ದಾರೆ.

ತಂಡ: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ನವಜ್ಯೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಕಪಿಲ್ ದೇವ್, ನಯನ್ ಮೊಂಗಿಯಾ (ವಿಕೆಟ್‌ಕೀಪರ್), ಹರಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು