ಶುಕ್ರವಾರ, ಮಾರ್ಚ್ 24, 2023
30 °C

ವಿರಾಟ್, ಶರ್ಮಾ ವಿರುದ್ಧ ಟೀಕೆ ಸಲ್ಲ: ಅಶ್ವಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಐಸಿಸಿ ಟ್ರೋಫಿ ಗೆದ್ದಿಲ್ಲವೆಂದು ಟೀಕಿಸುವುದು ತಪ್ಪು. ಅವರ ಮೇಲೆ ಒತ್ತಡ ಹಾಕಬಾರದು. ಅವರಿಗೂ ಒಂದಿಷ್ಟು ಸಮಯಾವಕಾಶ ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದ್ದಾರೆ. 

‘ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವಿಶ್ವಕಪ್ ಗೆಲುವಿನ ಸಂಭ್ರಮ ಕಂಡಿದ್ದು ಆರೂ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಬಳಿಕ. 1992, 1996, 1999, 2003 ಮತ್ತು 2007ರ ವಿಶ್ವಕಪ್‌ ಟೂರ್ನಿಗಳಲ್ಲಿ ಅವರು ಆಡಿದ್ದರು. ಅವರಂತಹ ದೊಡ್ಡ ಆಟಗಾರ 2011ರವರೆಗೆ ಕಾಯಬೇಕಾಯಿತು. ಮಹೇಂದ್ರಸಿಂಗ್ ಧೋನಿಯಂತಹ ಶ್ರೇಷ್ಠ ನಾಯಕ ವಿಶ್ವಕಪ್ ಗೆಲುವಿನ ಕನಸು ನನಸು ಮಾಡಿದರು. ಅದೇ ರೀತಿ ಎಲ್ಲರಿಂದಲೂ ಆಗುತ್ತದೆ ಎಂದು ಹೇಳುವುದು ಕಷ್ಟ’ ಎಂದು ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಅಶ್ವಿನ್ ಹೇಳಿದ್ದಾರೆ.

‘ರೋಹಿತ್ ಮತ್ತು ವಿರಾಟ್ 2007ರ ವಿಶ್ವಕಪ್ ಟೂರ್ನಿಯಲ್ಲಿ ಆಡಿರಲಿಲ್ಲ. 2011ರ ವಿಶ್ವಕಪ್ ಟೂರ್ನಿಯಲ್ಲಿಯೂ ರೋಹಿತ್ ಆಡಿರಲಿಲ್ಲ. ಆದರೆ ಕೊಹ್ಲಿ 2011, 2015 ಮತ್ತು 2019ರಲ್ಲಿ ಆಡಿದ್ದಾರೆ. 2011ರ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡದಲ್ಲಿ ಆಡಿದ್ದರು. ಇದರಲ್ಲಿ ರೋಹಿತ್ ಕೂಡ ಇದ್ದರು. ಆದರೂ ಅವರು ಐಸಿಸಿ ಟ್ರೋಫಿ ಜಯಿಸಿಲ್ಲ ಎಂದು ಹೇಳುವುದು ಸರಿಯಲ್ಲ’ ಎಂದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು