ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ನಲ್ಲಿ ತಂಗಾಳಿ ಸವಾಲು:ಅಜಿಂಕ್ಯ ರಹಾನೆ

Last Updated 1 ಜನವರಿ 2020, 20:01 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ತಿಂಗಳು ನ್ಯೂಜಿಲೆಂಡ್‌ ವಿರುದ್ಧ ವೆಲಿಂಗ್ಟನ್‌ ಮತ್ತು ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆಯುವ ಟೆಸ್ಟ್‌ ಪಂದ್ಯಗಳಲ್ಲಿ ಚಳಿಗಾಳಿಯದ್ದೇ ದೊಡ್ಡ ಸವಾಲಾಗಬಹುದು ಎಂದು ಭಾರತ ಕ್ರಿಕೆಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ.

ಭಾರತ, ನ್ಯೂಜಿಲೆಂಡ್‌ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯನ್ನು ಆಡಲಿದ್ದು, ಮೊದಲ ಪಂದ್ಯ ಫೆಬ್ರುವರಿ 21 ರಿಂದ 25ರವರೆಗೆ ವೆಲಿಂಗ್ಟನ್‌ನಲ್ಲಿ ನಿಗದಿಯಾಗಿದೆ. ಎರಡನೇ ಪಂದ್ಯ 29 ರಿಂದ ಮಾರ್ಚ್‌ 4ರವರೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಟೆಸ್ಟ್‌ ಸರಣಿಗೆ ಮೊದಲು ಕಿವೀಸ್‌ ವಿರುದ್ಧ ಐದು ಟಿ–20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳನ್ನೂ ಆಡಲಿದೆ.

ಸುದ್ದಿಸಂಸ್ಥೆ ಜೊತೆ ಸಂದರ್ಶನದ ವೇಳೆ ಸವಾಲುಗಳ ಬಗ್ಗೆ ಮಾತನಾಡಿದ ರಹಾನೆ, ‘ನಾವು 2014ರಲ್ಲಿ ಅಲ್ಲಿ ಆಡಿದ್ದೆವು. ಅಲ್ಲಿ ತಂಗಾಳಿಯ ಅಂಶವೂ ಪ್ರಭಾವ ಬೀರುತ್ತದೆ. ಹೀಗಾಗಿ ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವುದೂ ಮುಖ್ಯ’ ಎಂದು ಹೇಳಿದರು.31 ವರ್ಷದ ರಹಾನೆ 63 ಟೆಸ್ಟ್‌ ಪಂದ್ಯಗಳಿಂದ 4,112 ರನ್‌ ಗಳಿಸಿದ್ದಾರೆ.

2009ರಲ್ಲಿ ಭಾರತ ತಂಡ, ನ್ಯೂಜಿಲೆಂಡ್‌ ಪ್ರವಾಸ ಮಾಡಿದ್ದು ಆಗ ಮಹೇಂದ್ರ ಸಿಂಗ್ ಧೋನಿ ಪಡೆ ಉತ್ತಮ ಸಾಧನೆ ಪ್ರದರ್ಶಿಸಿತ್ತು.

‘ಆಸ್ಟ್ರೇಲಿಯಾ ವಿರುದ್ಧ ಮತ್ತು ಅದಕ್ಕಿಂತ ಮೊದಲು ಇಂಗ್ಲೆಂಡ್‌ ವಿರುದ್ಧ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಎಡಗೈ ವೇಗಿ ನೀಲ್‌ ವ್ಯಾಗ್ನರ್‌ ಅವರು ಹೇಗೆ ಬೌಲಿಂಗ್‌ ಮಾಡುತ್ತಾರೆ ಎಂಬ ಕುತೂಹಲ ಇದೆ’ ಎಂದರು. ಕಡೆಯ ನಾಲ್ಕು ಟೆಸ್ಟ್‌ಗಳಲ್ಲಿ ವ್ಯಾಗ್ನರ್‌ 27 ವಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT